ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ವಿಧಿವಶ

ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ವಿಧಿವಶ

238
0
SHARE

ಮುಂಬೈ(ಡಿ,4,2017):ಬಾಲಿವುಡ್ ಹಿರಿಯ ನಟ, ಪದ್ಮಭೂಷಣ ಪುರಸ್ಕೃತ ಶಶಿ ಕಪೂರ್(79) ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶಶಿಕಪೂರ್ ಮುಂಬೈನ  ಕೊಕಿಲಾ ಬೆನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. 2011ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ನಟ ಶಶಿಕಪೂರ್,2014ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದರು.

ಬಾಲನಟನಾಗಿ ಬಾಲಿವುಡ್ ಪ್ರವೇಶ ಮಾಡಿದ್ದ ಅವರು. ಧರ್ಮಪುತ್ರ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿ ತೆರೆಗೆ ಬಡ್ತಿ ಪಡೆದಿದ್ದರು. ದೀವಾರ್, ಜನೂನ್, ಕಲಿಯುಗ್ ಚಿತ್ರಗಳು ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದವು. ಸರಿ ಸುಮಾರು 61 ಸಿನಿಮಾಗಳಲ್ಲಿ ಅಭಿನಯಸಿರುವ ಅವರು 1999ರ ನಂತರ ತಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನಲೆಯಲ್ಲಿ ಸಿನಿಮಾ ರಂಗದಿಂದ ದೂರ ಉಳಿದಿದ್ದರು.

ಇವರಿಗೆ ಕರುಣ್ ಕಪೂರ್, ಕುನಾಲ್ ಕಪೂರ್, ಸಂಜನಾ ಕಪೂರ್ ಎಂಬ ಮಕ್ಕಳಿದ್ದಾರೆ.

NO COMMENTS

LEAVE A REPLY