ಪ್ರತಾಪ್ ಸಿಂಹ ರ್ಯಾಶ್ ಡ್ರೈವಿಂಗ್: ಎಫ್ ಐ ಆರ್ ದಾಖಲು

ಪ್ರತಾಪ್ ಸಿಂಹ ರ್ಯಾಶ್ ಡ್ರೈವಿಂಗ್: ಎಫ್ ಐ ಆರ್ ದಾಖಲು

299
0
SHARE

ಮೈಸೂರು(ಡಿ,3,2017):ಹುಣಸೂರಿನ ಹನುಮಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳಿತ್ತಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ಬಂಧಿಸಲು ಮುಂದಾದಾಗ ಪ್ರತಾಪ್ ಸಿಂಹ ರ್ಯಾಶ್ ಡ್ರೈವಿಂಗ್ ಮಾಡಿದ್ದಾರೆ.

ಮೈಸೂರು ಜಿಲ್ಲೆ ಬಿಳಿಕೆರೆ ಬಳಿ ಈ ಘಟನೆ ನಡೆದಿದೆ. ಹುಣಸೂರಿನಲ್ಲಿ ಹನುಮಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುಂಜಾಗೃತ ಕ್ರಮವಹಿಸಿ ಬಂಧಿಸಲು ಮುಂದಾದಾಗ ಸಂಸದ ಪ್ರತಾಪ್ ಸಿಂಹ ರ್ಯಾಶ್ ಡ್ರೈವಿಂಗ್ ಮಾಡಿ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸಿ ತೆರಳಿದ್ದಾರೆ.ಈ ವೇಳೆ ಪೊಲೀಸ್ ಸಿಬ್ಬಂದಿಗಳಿಗೆ ಸಣ್ಣಪುಟ್ಟಗಾಯಗಳಾಗಿದೆ ಎನ್ನಲಾಗುತ್ತಿದೆ.  ಸಂಸದ ಪ್ರತಾಪ್ ಸಿಂಹ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಎಸ್ಪಿ ರವಿ.ಡಿ ಚೆನ್ನಣ್ಣನವರ್, ಮುಂಜಾಗ್ರತ ಕ್ರಮವಾಗಿ ಸಂಸದರನ್ನು ಬಂಧಿಸಿದ್ದೇವೆ. ಮಾರ್ಗದ ವಿಚಾರವಾಗಿ ಸಣ್ಣಪುಟ್ಟಗೊಂದಲಗಳಾಗಿತ್ತು. ನಿರ್ಧಿಷ್ಟ ಪ್ರದೇಶದಲ್ಲಿ ಮಾತ್ರ ಮೆರವಣಿಗೆಗೆ ನಿರ್ಬಂಧ ಹೇರಲಾಗಿತ್ತು. ಯಾವುದೇ ತೊಂದರೆ ಇಲ್ಲ. ಜನಸಾಮಾನ್ಯರು ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದರು.

NO COMMENTS

LEAVE A REPLY