ಹುಣಸೂರಿನಲ್ಲಿ ಹನುಮ ಜಯಂತಿ: ಪ್ರತಾಪ್ ಸಿಂಹ ಸೇರಿ ನೂರು ಮಂದಿ ಬಂಧನ

ಹುಣಸೂರಿನಲ್ಲಿ ಹನುಮ ಜಯಂತಿ: ಪ್ರತಾಪ್ ಸಿಂಹ ಸೇರಿ ನೂರು ಮಂದಿ ಬಂಧನ

273
0
SHARE

ಮೈಸೂರು(ಡಿ,3,2017):ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ಹನುಮಜಯಂತಿ 25ನೇ ವರ್ಷದ ಭವ್ಯ ಮೆರವಣಿಗೆ ನಡೆಸಲು ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೆ, ಮುಂಜಾಗ್ರತ ಕ್ರಮವಾಗಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಮಸೇನೆ ಮತ್ತು ವಿಹಿಂಪ ಹನುಮ ಜಯಂತಿ ಮೆರವಣಿಗೆಗೆ ಸಿದ್ದತೆ ನಡೆಸುತ್ತಿತ್ತು.ಆದರೆ ಮಾರ್ಗಸೂಚಿ ಬಿಟ್ಟು ಬೇರೆ ಕಡೆಯಲ್ಲಿ ಅನುಮಾನಸ್ಪದವಾಗಿ ಗುಂಪುಕಟ್ಟಿದ್ದ ಹಿನ್ನೆಲೆ ಪೊಲೀಸರು 100 ಮಂದಿ ಹನುಮ ಭಕ್ತರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ.

ಈ ನಡುವೆ ಹುಣಸೂರು ಪ್ರವೇಶಿಸುವ ಮುನ್ನವೇ ಮಾಲಾಧಾರಿ ಪ್ರತಾಪ್ ಸಿಂಹ ಅವರನ್ನು ಮೈಸೂರು ಎಸ್ಪಿ ರವಿ ಡಿ ಚೆನ್ನಣ್ಣನವರ್ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕರಿತು ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್ ವಿರುದ್ಧ ಕಿಡಿಕಾರಿದ ಪ್ರತಾಪ್ ಸಿಂಹ, ನಿಮ್ಮ ಬುದ್ದಿವಂತಿಕೆಯನ್ನ ಕಳ್ಳರನ್ನು ಹಿಡಿಯಲು ಉಪಯೋಗಿಸಿ.ನನ್ನನ್ನು ಎಷ್ಟು ದಿನವಾದ್ರೂ ಬಂಧಿಸಿ.ಆದರೆ ಪ್ರತಿಷ್ಟಾಪಿತ ಅಂಜನೇಯ ಮೂರ್ತಿಗೆ ತೊಂದರೆಯಾದರೇ ಮುಂದೆ ಆಗುವ ಆನಾಹುತಗಳಿಗೆ ನೀವೆ ಹೊಣೆ ಎಂದು ವಾಗ್ದಾಳಿ ನಡೆಸಿದರು.

ಹನುಮ ಜಯಂತಿಯ ಮೆರವಣಿಗೆಯು ಪುರಸಭೆಯಿಂದ ಬಸ್ ನಿಲ್ದಾಣದ ವರಗೆ ಇರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 6ಗಂಟೆವರೆಗೆ ಹುಣಸೂರು ನಗರಕ್ಕೆ ವಾಹನ ಪ್ರವೇಶ ನಿರ್ಬಂಧಿಸಲಾಗಿದೆ.

NO COMMENTS

LEAVE A REPLY