ಮಂಡ್ಯದಲ್ಲಿ ರಮ್ಯಾಕ್ಯಾಂಟಿನ್ ಪ್ರಾರಂಭ:ಹತ್ತು ರೂ. ಗೆ ಊಟ ತಿಂಡಿ

ಮಂಡ್ಯದಲ್ಲಿ ರಮ್ಯಾಕ್ಯಾಂಟಿನ್ ಪ್ರಾರಂಭ:ಹತ್ತು ರೂ. ಗೆ ಊಟ ತಿಂಡಿ

194
0
SHARE

ಮಂಡ್ಯ(ಡಿ,3,2017):ಇಂದಿರಾ ಕ್ಯಾಂಟಿನ್ ಮಾದರಿಯಲ್ಲೇ ಮಂಡ್ಯದಲ್ಲಿ ಮಾಜಿ ಸಂಸದೆ ರಮ್ಯಾ ಬೆಂಬಲಿಗರೊಬ್ಬರು ರಮ್ಯಾ ಕ್ಯಾಂಟಿನ್ ಶುರು ಮಾಡಿದ್ದಾರೆ.

ರಮ್ಯಾ ಅಭಿಮಾನಿ ರಘು ಎಂಬವವರು ರಮ್ಯಾ ಕ್ಯಾಂಟಿನ್ ಆರಂಭಿಸಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮನಂದ ಅವರು ಅಶೋಕನಗರದಲ್ಲಿ ಕ್ಯಾಂಟಿನ್ ಉದ್ಘಾಟನೆ ಮಾಡಿದರು. ಇಂದಿನಿಂದ ರಮ್ಯಾ ಕ್ಯಾಂಟೀನ್ ಮಂಡ್ಯದಲ್ಲಿ ಮದ್ಯಮವರ್ಗದವರಿಗೆ ಉಪಯೋಗಕ್ಕೆ ಬರಲಿದೆ.

ಇಂದಿರಾ, ಅಪ್ಪಾಜಿ ಕ್ಯಾಂಟೀನ್ ಗೂ ರಮ್ಯಾ ಕ್ಯಾಂಟೀನ್‌ ವಿಭಿನ್ನವಾಗಿದ್ದು, ಕೇವಲ 10 ರೂ.ಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ. ಜತೆಗೆ ಪಾರ್ಸಲ್ ಖರೀದಿಗೂ ಹತ್ತು ರೂಪಾಯಿ ನಿಗದಿಯಾಗಿದೆ. ವಿವಿಧ ಬಗೆಯ ದೋಸೆ, ರವೆ ಇಡ್ಲಿ, ಚಪಾತಿ, ಮುದ್ದೆ, ಉದ್ದಿನ ವಡೆ, ಮಸಾಲೆ ವಡೆ, ಅನ್ನ ಸಾಂಬಾರ್ ಕ್ಯಾಂಟಿನ್ ನಲ್ಲಿ ಸಿಗಲಿದ್ದು, ಮಂಡ್ಯ ಮಿಮ್ಸ್ ಆಸ್ಪತ್ರೆ ಬಳಿಯೇ ಕ್ಯಾಂಟೀನ್ ಆರಂಭಿಸಲಾಗಿದೆ.

ಬಡ ಮತ್ತು ಮಧ್ಯಮವರ್ಗದ ಜನರನ್ನ ಸೆಳೆಯಲು ರಮ್ಯಾ ಬೆಂಬಲಿಗರು ಈ  ಬಂಪರ್ ಆಫರ್ ನೀಡಿದ್ದಾರೆ.

NO COMMENTS

LEAVE A REPLY