ಹಲವು ನಾಯಕರು ಕೈ ಸೇರಲಿದ್ದಾರೆ: ಸಿಎಂ ಸಿದ್ದರಾಮಯ್ಯ

ಹಲವು ನಾಯಕರು ಕೈ ಸೇರಲಿದ್ದಾರೆ: ಸಿಎಂ ಸಿದ್ದರಾಮಯ್ಯ

194
0
SHARE

ಮೈಸೂರು(ನ,30,2017):ಮುಂದಿನ ದಿನಗಳಲ್ಲಿ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಯಾವ ಯಾವ ನಾಯಕರು ಕೈ ಸೇರಲಿದ್ದಾರೆ ಎಂದು ಶೀಘ್ರ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾವುದೇ ನಾಯಕರು ಪಕ್ಷಕ್ಕೆಬಂದರೆ ಅವರಿಗೆ ನಮ್ಮಿಂದ ಸ್ವಾಗತವಿದೆ. ಹಲವು ನಾಯಕರು ಕೈ ಸೇರಲಿದ್ದಾರೆ. ಯಾವ ಯಾವ ನಾಯಕರು ಪಕ್ಷ ಸೇರಲಿದ್ದಾರೆ ಎಂದು ಶೀಘ್ರ ತಿಳಿಸುವೆ ಎಂದು  ಮತ್ತಷ್ಟು ನಾಯಕರು ಪಕ್ಷ ಸೇರುವ  ಬಗ್ಗೆ ಸುಳಿವು ನೀಡಿದರು.

ಅದರಂತೆ ಇಂದು ಮೈಸೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವೆ. ಅಧಿಕಾರಿಗಳ ಜೊತೆ ಸಂವಾದದಲ್ಲಿ ಪಾಲ್ಗೊಳ್ಳುವೆ ಎಂದು ಸಿಎಂ ತಿಳಿಸಿದರು.

NO COMMENTS

LEAVE A REPLY