ಮನೆ ಕಟ್ಟುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರಿಗೆ ಗಾಯ

ಮನೆ ಕಟ್ಟುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರಿಗೆ ಗಾಯ

163
0
SHARE

ಮೈಸೂರು(ನ,30,2017):ನಗರದ ಪಡುವಾರಹಳ್ಳಿಯಲ್ಲಿನ 5ನೇ ಮುಖ್ಯರಸ್ತೆಯಲ್ಲಿ ಮನೆ ನಿರ್ಮಾಣದ ವೇಳೆ ಹಳ್ಳ ತೆಗೆಯುವಾಗ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ.

ಪಡುವಾರಹಳ್ಳಿಯ 5ನೇ ಮುಖ್ಯರಸ್ತೆಯ ನಿವಾಸಿ ಚನ್ನಪ್ಪ ಎಂಬವರು ಮನೆ ನಿರ್ಮಿಸುತ್ತಿದ್ದರು. ಮನೆ ಕಟ್ಟಲಿಕ್ಕೆ ಚಿತ್ರದುರ್ಗ ಮೂಲದ ಬಶೀರ್ ಹಾಗೂ ರವಿ ಎಂಬವರು ಕೆಳಕ್ಕಿಳಿದು ಹಳ್ಳ ತೆಗೆಯುತ್ತಿರುವಾಗ ಪಕ್ಕದಲ್ಲಿನ ಮಣ್ಣು ಕುಸಿದು ಅವರ ಮೈಮೇಲೆ ಬಿದ್ದಿದೆ. ಇಬ್ಬರ ಕಾಲಿಗೂ ಪೆಟ್ಟಾಗಿದೆ.  ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಅವರನ್ನು ಮೇಲಕ್ಕೆತ್ತಿ ಗಾಯಾಳುಗಳನ್ನು ಕಾಮಾಕ್ಷಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

NO COMMENTS

LEAVE A REPLY