ಪಿ.ಜಿ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿದ ಕುಲಪತಿಗಳು

ಪಿ.ಜಿ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿದ ಕುಲಪತಿಗಳು

226
0
SHARE

ಮೈಸೂರು(ನ.28.2017):ಮೈಸೂರು ವಿವಿ ಹಂಗಾಮಿ ಕುಲಪತಿಗಳಾದ ಪ್ರೋ ಸಿ.ಬಸವರಾಜು ಹಾಗೂ ಆಡಳಿತ ವರ್ಗವು ಸ್ನಾತಕೋತ್ತರ ವಿದ್ಯಾರ್ಥಿ ನಿಲಯಗಳಿಗೆ ಬೇಟಿ ನೀಡಿದರು.

ಈ ಕುರಿತಂತೆ ಪ್ರಭಾರ ಕುಲಪತಿಗಳಾದ ಪ್ರೋ ಸಿ.ಬಸವರಾಜು ಮತ್ತು ಕುಲಸಚಿವರಾದ ಡಿ.ಭಾರತಿ ಸಮ್ಮುಖದಲ್ಲಿ ಎಲ್ಲಾ ಆಡಳಿತ ವರ್ಗವು ಬೇಟಿ ನೀಡಿ ವಿದ್ಯಾರ್ಥಿ ನಿಲಯದಲ್ಲಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಶೀಲಿಸಿದರು.

ನಿಲಯದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಊಟ, ಕೂಠಡಿ ಹಾಗೂ ಶೌಚಾಲಯ ಶುಚಿತ್ವವಾಗಿದಯೆ ಎಂದು ಸ್ವತಃ ತಾವೆ ಸ್ಥಳಕ್ಕೆ ಬೇಟಿ ಕೊಟ್ಟರು. ಅದಗೆಟ್ಟಿದ್ದ ಕೆಲವು ಕೊಠಡಿಗಳಿಗೆ ಎರಡು ದಿನಗಳಲ್ಲಿ ಸರಿ ಮಾಡಿಸುಂತೆ ನಿಲಯಪಾಲಕರಿಗೆ ಸೂಚಿಸಿದರು.

ಅನಧಿಕೃತವಾಗಿ ವಾಸವಿರುವ ವಿದ್ಯಾರ್ಥಿಗಳನ್ನು ಕಾಲಿಮಾಡಿಸಿ, ಕೂಡಲೇ ಅವರ ಕೊಠಡಿಗಳಿಗೆ ಬೀಗ ಹಾಕಿಸುವುದಾಗಿ ನಿರ್ದಾರ ಕೈಗೊಂಡದ್ದಿರು. ತಕ್ಷಣವೇ ಈ ಕ್ರಮ ಸರಿಯಲ್ಲ, ಸ್ವಲ್ಪ ದಿನ ಕಾಲಾವಕಾಶ ಕೊಡಿ ಎಂದು ಸಂಶೋಧನಾ ವಿದ್ಯಾರ್ಥಿಗಳು ಮನವಿ ಮಾಡಿದರು ಹಾಗೂ ಮುಂತಾದ ಮೂಲಸೌಲಭ್ಯ ನೀಡುವುದಾಗಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಿಲಯಗಳಿಗೆ ಅವಶ್ಯಕತೆ ಇರುವ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿಲಾಗುವುದು, ಹಾಗೂ ಅಕ್ರಮ, ಅಶುಚಿತ್ವದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವುದಾಗಿ ವಿದ್ಯಾರ್ಥಿಗಳಿಗೆ ಕುಲಪತಿಗಳು ಭರವಸೆ ನೀಡಿದರು.
– ಚಂದ್ರಶೇಖರ್ ಬಿ.ಎನ್

NO COMMENTS

LEAVE A REPLY