ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಮೈಸೂರಿನಲ್ಲಿ ನಡೆಯಲಿದೆ

259
0
SHARE

ಮೈಸೂರು(ನ,28,2017): ನಗರದಲ್ಲಿ ಜಿಲ್ಲಾಡಳಿತ ಮತ್ತು ನವದೆಹಲಿಯ ರಾಷ್ಡ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮೈಸೂರಿನಲ್ಲಿ ನವೆಂಬರ್ 29 ರಿಂದ ಡಿಸಂಬರ್ 1 ರವರಗೆ  3 ದಿನಗಳ 25 ನೇ ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ನಡೆಯಲಿದೆ.

29 ರಂದು ಬೆಳಗ್ಗೆ 10.30 ಮೈಸೂರು ವಿವಿ ಮಾನಸ ಗಂಗೋತ್ರಿಯ ಸೆನೆಟ್‍ಭವನದಲ್ಲಿ ಸಮಾವೇಶಕ್ಕೆ ಚಾಲನೆ ನೀಡಲಿದ್ದು. ಸಮಾವೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಮಕ್ಕಳ ಭಾಗವಹಿಸುವರು. ಅವರಿಗೆ  ವಸತಿ, ಸಾರಿಗೆ ಮತ್ತು ಊಟದ ವ್ಯವಸ್ಥೆ ಜೊತೆಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ.

ವಿಚಾರಗೋಷ್ಠಿ, ಸಂಶೋಧನ ಕಾರ್ಯಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಾಗೂ ಪ್ರಾಜೆಕ್ಟ್ ಕಾರ್ಯಕ್ರಮಗಳು ವಿಜ್ಞಾನ ಭವನದಲ್ಲಿ ನಡೆಯಲಿವೆ. ಗ್ರಾಮೀಣ ಮತ್ತು ನಗರ ಪ್ರದೇಶದ 10 ರಿಂದ 14 ವರ್ಷ ಹಾಗೂ 14 ರಿಂದ 18 ವರ್ಷದ ಮಕ್ಕಳು ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಆಯ್ಕೆಯಾದ ರಾಜ್ಯ ಮಟ್ಟದ ವಿಜ್ಞಾನ ಸಮ್ಮೇಳನಕ್ಕೆ ರಾಜ್ಯದ ಪ್ರತಿ ಜಿಲ್ಲೆಯಿಂದ 10 ತಂಡಗಳಂತೆ 1200 ಮಕ್ಕಳು 300 ಶಿಕ್ಷಕರು ಆಗಮಿಸುವರು. ತೀರ್ಪುಗಾರರಾಗಿ 100 ಅಧ್ಯಾಪಕರು ಪಾಲ್ಗೊಳ್ಳಲಿದ್ದಾರೆ.

 ಈ ಸಮ್ಮೇಳನದಲ್ಲಿ  ಆಯ್ಕೆಯಾದ  ವಿದ್ಯಾರ್ಥಿಗಳನ್ನು ಗುಜರಾತ್‍ನ ಅಹಮದಾಬಾದ್‍ನಲ್ಲಿ  ಡಿಸಂಬರ್ 27 ರಿಂದ ನಡೆಯುವ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ನವೆಂಬರ್ 30 ರಂದು ರಾಕೆಟ್ ಉಡಾವಣೆ ಪ್ರಾತ್ಯಕ್ಷಿಕೆಯನ್ನು ಇಸ್ರೋ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಬಿ ಆರ್.ಗುರುಪ್ರಸಾದ್ ನಡೆಸಿಕೊಡುವರು. ಹಾವುಗಳು ಕುರಿತು ಸ್ನೇಕ್ ಶ್ಯಾಮ್ ಉಪನ್ಯಾಸ,  ಪವಾಡ ರಹಸ್ಯ ಬಯಲು ಕುರಿತು ಡಾ. ಹುಲಿಕಲ್ ನಟರಾಜ್ ಮಾತನಾಡುವರು. ಡಿಸಂಬರ್ 1 ರಂದು ನಿಜ ಜೀವನದಲ್ಲಿ ಗಣಿತ ಕುರಿತು ಎಸ್.ಜೆ.ಸಿ.ಇ ಗಣಿತ ಪ್ರಾಧ್ಯಾಪಕ ಪ್ರೊ.ಸಿ.ಎಸ್.ಯೋಗಾನಂದ ಅವರು ಉಪನ್ಯಾಸ ನೀಡಲಿದ್ದಾರೆ.

8,2017): ನಗರದಲ್ಲಿ ಜಿಲ್ಲಾಡಳಿತ ಮತ್ತು ನವದೆಹಲಿಯ ರಾಷ್ಡ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮೈಸೂರಿನಲ್ಲಿ ನವೆಂಬರ್ 29 ರಿಂದ ಡಿಸಂಬರ್ 1 ರವರಗೆ 3 ದಿನಗಳ 25 ನೇ ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ನಡೆಯಲಿದೆ.

29 ರಂದು ಬೆಳಗ್ಗೆ 10.30 ಮೈಸೂರು ವಿವಿ ಮಾನಸ ಗಂಗೋತ್ರಿಯ ಸೆನೆಟ್‍ಭವನದಲ್ಲಿ ಸಮಾವೇಶಕ್ಕೆ ಚಾಲನೆ ನೀಡಲಿದ್ದು. ಸಮಾವೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಮಕ್ಕಳ ಭಾಗವಹಿಸುವರು. ಅವರಿಗೆ  ವಸತಿ, ಸಾರಿಗೆ ಮತ್ತು ಊಟದ ವ್ಯವಸ್ಥೆ ಜೊತೆಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ.

ವಿಚಾರಗೋಷ್ಠಿ, ಸಂಶೋಧನ ಕಾರ್ಯಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಾಗೂ ಪ್ರಾಜೆಕ್ಟ್ ಕಾರ್ಯಕ್ರಮಗಳು ವಿಜ್ಞಾನ ಭವನದಲ್ಲಿ ನಡೆಯಲಿವೆ. ಗ್ರಾಮೀಣ ಮತ್ತು ನಗರ ಪ್ರದೇಶದ 10 ರಿಂದ 14 ವರ್ಷ ಹಾಗೂ 14 ರಿಂದ 18 ವರ್ಷದ ಮಕ್ಕಳು ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಆಯ್ಕೆಯಾದ ರಾಜ್ಯ ಮಟ್ಟದ ವಿಜ್ಞಾನ ಸಮ್ಮೇಳನಕ್ಕೆ ರಾಜ್ಯದ ಪ್ರತಿ ಜಿಲ್ಲೆಯಿಂದ 10 ತಂಡಗಳಂತೆ 1200 ಮಕ್ಕಳು 300 ಶಿಕ್ಷಕರು ಆಗಮಿಸುವರು. ತೀರ್ಪುಗಾರರಾಗಿ 100 ಅಧ್ಯಾಪಕರು ಪಾಲ್ಗೊಳ್ಳಲಿದ್ದಾರೆ.

ಈ ಸಮ್ಮೇಳನದಲ್ಲಿ  ಆಯ್ಕೆಯಾದ ವಿದ್ಯಾರ್ಥಿಗಳನ್ನು ಗುಜರಾತ್‍ನ ಅಹಮದಾಬಾದ್‍ನಲ್ಲಿ ಡಿಸಂಬರ್ 27 ರಿಂದ ನಡೆಯುವ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ನವೆಂಬರ್ 30 ರಂದು ರಾಕೆಟ್ ಉಡಾವಣೆ ಪ್ರಾತ್ಯಕ್ಷಿಕೆಯನ್ನು ಇಸ್ರೋ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಬಿ ಆರ್.ಗುರುಪ್ರಸಾದ್ ನಡೆಸಿಕೊಡುವರು. ಹಾವುಗಳು ಕುರಿತು ಸ್ನೇಕ್ ಶ್ಯಾಮ್ ಉಪನ್ಯಾಸ, ಪವಾಡ ರಹಸ್ಯ ಬಯಲು ಕುರಿತು ಡಾ. ಹುಲಿಕಲ್ ನಟರಾಜ್ ಮಾತನಾಡುವರು. ಡಿಸಂಬರ್ 1 ರಂದು ನಿಜ ಜೀವನದಲ್ಲಿ ಗಣಿತ ಕುರಿತು ಎಸ್.ಜೆ.ಸಿ.ಇ ಗಣಿತ ಪ್ರಾಧ್ಯಾಪಕ ಪ್ರೊ.ಸಿ.ಎಸ್.ಯೋಗಾನಂದ ಅವರು ಉಪನ್ಯಾಸ ನೀಡಲಿದ್ದಾರೆ.

NO COMMENTS

LEAVE A REPLY