ಸಂವಿಧಾನ ಕುರಿತು ಪೇಜಾವರ ಶ್ರೀಗಳ ಹೇಳಿಕೆ ಖಂಡಿಸಿ ನುಡಿಜಾತ್ರೆಯಲ್ಲಿ ಪ್ರತಿಭಟನೆ

ಸಂವಿಧಾನ ಕುರಿತು ಪೇಜಾವರ ಶ್ರೀಗಳ ಹೇಳಿಕೆ ಖಂಡಿಸಿ ನುಡಿಜಾತ್ರೆಯಲ್ಲಿ ಪ್ರತಿಭಟನೆ

252
0
SHARE

ಮೈಸೂರು(ನ,26,2017):ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್ ಸಮಾವೇಶಕ್ಕೆ ಪ್ರಗತಿಪರಸಾಹಿತಿಗಳು ವಿರೋಧ ವ್ಯಕ್ತಪಡಿಸಿ ಮೈಸೂರಿನಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೆಳನದ ಪ್ರಮುಖ ವೇದಿಕೆ ಮುಂದೆ ಡಾ.ಮೀನಾಕ್ಷಿ ಬಾಳಿ, ಮಹಿಳಾ ಪರ ಹೋರಾಟಗಾರ್ತಿ ಕಲ್ಬರ್ಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಧರ್ಮ ಸಂಸತ್ ಸಮಾವೇಶ ಹಾಗೂ ಪೇಜಾವರ ಶ್ರೀಗಳು ಸಂವಿಧಾನ ರಚನೆ,ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ  ನೀಡಿದ ಹೇಳಿಕೆ ವಿರುದ್ದ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ನಿನ್ನೆ ಧರ್ಮ ಸಂಸದ್ ನಲ್ಲಿ ಪೇಜಾವರ ಶ್ರೀಗಳು ಮಾತನಾಡುತ್ತಾ,ಸಂವಿಧಾನವನ್ನ ಅಂಬೇಡ್ಕರ್ ಒಬ್ಬರೇ ಬರೆದಿಲ್ಲ ಎಂದಿದ್ದರು.ಈ ಕುರಿತು ಡಾ‌.ಅಂಬೇಡ್ಕರ್ ರಚಿಸಿರುವ ಸಂವಿಧಾನ ಒಪ್ಪದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ. ಇಲ್ಲದಿದ್ದರೇ ದೇಶದಲ್ಲಿ ಅಸಹಿಷ್ಣತೆ ಹೆಚ್ಚುತ್ತಿದೆ. ಧರ್ಮದ ಹೆಸರಲ್ಲಿ ಜನ ಸಾವನ್ನಪ್ಪಿತ್ತಿದ್ರೂ ಜಾನುವಾರುಗಳ ಬಗ್ಗೆ ಮಾತನಾಡ್ತಾರೆ ಎಂದು ಕಿಡಿಕಕಾರಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನ ವೇದಿಕೆ ಬಳಯಿಂದ ಹೊರ ಕರೆತಂದರು.

NO COMMENTS

LEAVE A REPLY