ದ.ರಾ ಬೇಂದ್ರೆ ತವರೂರಲ್ಲಿ 84 ನೇ ಕನ್ನಡ ಸಾಹಿತ್ಯ ಸಮ್ಮೆಳನ ಜರುಗಲಿದೆ

ದ.ರಾ ಬೇಂದ್ರೆ ತವರೂರಲ್ಲಿ 84 ನೇ ಕನ್ನಡ ಸಾಹಿತ್ಯ ಸಮ್ಮೆಳನ ಜರುಗಲಿದೆ

328
0
SHARE

ಮೈಸೂರು(ನ,26,2017):ಜ್ಞಾನಪೀಠ ಕವಿ ದ.ರಾ ಬೇಂದ್ರೆ ತವರೂರಾದ ಧಾರವಾಡದಲ್ಲಿ ಮುಂದಿನ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನ ನಡೆಸಲು ನಿರ್ಧರಿಸಲಾಗಿದೆ.

ಕಳೆದ ಎರಡು ದಿನಗಳಿಂದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ವಿಜೃಂಭಣೆಯಿಂದ  ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿದ್ದು, ಇಂದು ತೆರೆಬೀಳಲಿದೆ. ಮುಂದಿನ ವರ್ಷದ ಸಾಹಿತ್ಯ ಸಮ್ಮೆಳನದ ಆತಿಥ್ಯದ ಬಗ್ಗೆ  ನಿನ್ನೆ ರಾತ್ರಿ ಮೈಸೂರಿನ ಸ್ಕ್ವೌಟ್ ಆಂಡ್ ಗೈಡ್ಸ್ ಮೈದಾನದಲ್ಲಿ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈ ಸಭೆಯಲ್ಲಿ ಮುಂದಿನ ಭಾರಿ 84ನೇ ಸಾಹಿತ್ಯ ಸಮ್ಮೇಳನವನ್ನ ಪೇಡಾನಗರಿ ಧಾರವಾಡದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವರಕವಿ ದ.ರಾ ಬೇಂದ್ರೆ ತವರು ಧಾರವಾಡದಲ್ಲಿ 60 ವರ್ಷಗಳ ಬಳಿಕ ಅಕ್ಷರ ಹಬ್ಬ ನಡೆಯಲಿದೆ.

NO COMMENTS

LEAVE A REPLY