ಕನ್ನಡ ಸಮ್ಮೇಳನಕ್ಕೆ ಬಾಂಬ್ ಸ್ಪೋಟದ ಬೆದರಿಕೆ ಪತ್ರ

ಕನ್ನಡ ಸಮ್ಮೇಳನಕ್ಕೆ ಬಾಂಬ್ ಸ್ಪೋಟದ ಬೆದರಿಕೆ ಪತ್ರ

235
0
SHARE

ಮೈಸೂರು(ನ,25,2017):ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2ನೇ ದಿನವೂ ಅಕ್ಷರ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಇದರ ಜತೆಗೆ ಆತಂಕದ ಛಾಯೆಯೊಂದು ಮೂಡಿದೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ನುಡಿಹಬ್ಬದಲ್ಲಿ ಮುಸ್ಲಿಂ ಸಾಹಿತ್ಯಕ್ಕೆ ಅವಕಾಶ ನೀಡಿಲ್ಲ. ಹಾಗೂ ಮುಸ್ಲೀಂ ಶಿಕ್ಷಕರನ್ನ ಕಡೆಗಣಿಸಲಾಗಿದೆ. ಹೀಗಾಗಿ ಸಮ್ಮೇಳನದಲ್ಲಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಪತ್ರ ಬಂದಿದೆ ಎನ್ನಲಾಗುತ್ತಿದೆ.

ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಅವರಿಗೆ ಕಳೆದ ಮೂರು ದಿನಗಳ ಹಿಂದೆಯೇ ಯಾರೂ ಈ ಬೆದರಿಕೆ ಪತ್ರ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಬೆದರಿಕೆ ಪತ್ರವನ್ನ ಪೊಲೀಸ್ ಆಯುಕ್ತರಿಗೆ ಉಪನಿರ್ದಶಕಿ ಮಂಜುಳಾ ಅವರು ರವಾನಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಇನ್ನು ಇದನ್ನ ಕಡೆಗಣಿಸಿದರೇ ಉದಾಸೀನ ತೋರಿದರೇ ರಕ್ತಪಾತ ಮಾಡಬೇಕಾಗುತ್ತದೆ ಎಂದು ಅನಾಮದೇಯ ವ್ಯಕ್ತಿ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗುತ್ತಿದೆ. ಬೆದರಿಕೆ ಪತ್ರ ಹಿನ್ನೆಲೆ ಪೊಲೀಸರು ಹೆಚ್ಚಿನ ಭದ್ರತೆ ವಹಿಸಲು ಮುಂದಾಗಿದ್ದಾರೆ. ಮೂರು ದಿನಗಳ ಕಾಲ ನಡೆಯುತ್ತಿರುವ ಸಾಹಿತ್ಯಹಬ್ಬದಲ್ಲಿ ಅಪಾರ ಕನ್ನಡ ಅಭಿಮಾನಿಗಳು ಪಾಲ್ಗೊಳ್ಳುತ್ತಿದ್ದು, ಇದೀಗ ಬಾಂಬ್ ಬೆದರಿಕೆಯ ಆತಂಕ ಮನೆ ಮಾಡಿದೆ ಎನ್ನಲಾಗುತ್ತಿದೆ.

NO COMMENTS

LEAVE A REPLY