ಪದ್ಮಾವತಿ: ಮೈಸೂರಿನಲ್ಲಿ ಪ್ರತಿಭಟನೆ

ಪದ್ಮಾವತಿ: ಮೈಸೂರಿನಲ್ಲಿ ಪ್ರತಿಭಟನೆ

187
0
SHARE

ಮೈಸೂರು(ನ,23,2017):ಚಿತ್ರದಲ್ಲಿ ರಜಪೂತ್ ಜನಾಂಗಕ್ಕೆ ಧಕ್ಕೆಯಾಗುವಂತೆ ಚಿತ್ರಿಸಿರುವ ಆರೋಪ ಮೇಲೆ ಮೈಸೂರಿನಲ್ಲೂ ಹಿಂದಿ ಚಲನಚಿತ್ರ ಪದ್ಮಾವತಿ ಚಿತ್ರ ವಿರುದ್ದ ಪ್ರತಿಭಟನೆ ನಡೆಯಿತು.

ಚಿತ್ರದಲ್ಲಿ ರಜಪೂತರ ಭಾವನೆಗಳಿಗೆ ಅವಮಾನವಾಗುವಂತೆ ಚಿತ್ರಿಸಿದ್ದು, ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಪದ್ಮಾವತಿ ಚಿತ್ರ ಬಿಡುಗಡೆಗೊಳಿಸದಂತೆ ಅಥವಾ ಅನುಚಿತ ಭಾಗಗಳನ್ನು ತೆಗೆದುಹಾಕುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ರಜಪೂತ್ ಸಮಾಜ ಸೇರಿದಂತೆ ಇನ್ನಿತರ ಸಂಘಟನೆಗ ಜಾಥ  ನಡೆಸಿದರು.

ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಸಂಘಟನೆ ಕಾರ್ಯಕರ್ತರು ಮನವಿ ಮಾಡಿದರು. ಸಂಜಯ್ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದಲ್ಲಿ ಅವಹೇಳನಕಾರಿ ಅಂಶವಿದೆ ಎಂದು ಆರೋಪಿಸಲಾಗಿದೆ.

NO COMMENTS

LEAVE A REPLY