ಶಾಸಕ ಸಾ.ರಾ. ಮಹೇಶ್ ಪುತ್ರನಿಂದ ಯುವಕನ ಮೇಲೆ ಅಲ್ಲೆ

ಶಾಸಕ ಸಾ.ರಾ. ಮಹೇಶ್ ಪುತ್ರನಿಂದ ಯುವಕನ ಮೇಲೆ ಅಲ್ಲೆ

253
0
SHARE

ಮೈಸೂರು(ನ,22,2017):ಕೆ.ಆರ್ ನಗರ ಕ್ಷೇತ್ರದ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಪುತ್ರ ಜಯಂತ್ ತನ್ನ ಸ್ನೇಹಿತರ ಜತೆ ಸೇರಿ ಯುವಕನೋರ್ವನಿಗೆ ಮನಬಂದಂತೆ ಥಳಿಸಿರುವ ಘಟನೆ ನಡೆದಿದೆ.

ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಜಯಂತ್‌ ಹಾಗೂ ಆತನ ಸ್ನೇಹಿತರು ಯುವಕನೊಬ್ಬನಿಗೆ ಮನಬಂದಂತೆ ಥಳಿಸಿದ್ದು ಇದೀಗ ವಿಡಿಯೋ ವೈರಲ್ ಆಗಿದೆ. ಯುವಕ ಎಷ್ಟೇ ಗೋಗರೆದರೂ ಬಿಡದೆ ಜಯಂತ್ ಮತ್ತು ಅವರ ಸ್ನೇಹಿತರು
ಅಮಾನವೀಯತೆಯಿಂದ ಕೋಲಿನಲ್ಲಿ ಥಳಿಸಿದ್ದಾರೆ.

ಶಾಸಕರ ಪುತ್ರ ಎಂಬ ದರ್ಪದಿಂದ ಹೀಗೆ ಯುವಕನ ಮೇಲೆ ಹಲ್ಲೆ ಮಾಡಿರುವುದನ್ನ ಸಾರ್ವಜನಿಕ ವಲಯ ಈ ಕೃತ್ಯವನ್ನು ಖಂಡಿಸಿದೆ.

NO COMMENTS

LEAVE A REPLY