ಖಾಸಗಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ: 30ಕ್ಕೂ ಹೆಚ್ಚು ಮಂದಿ ಪ್ರಾಣಾಪಾಮದಿಂದ ಪಾರು

ಖಾಸಗಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ: 30ಕ್ಕೂ ಹೆಚ್ಚು ಮಂದಿ ಪ್ರಾಣಾಪಾಮದಿಂದ ಪಾರು

143
0
SHARE

ಹಾಸನ(ನ,22,2017):ಯಾಂತ್ರಿಕ ದೋಷದಿಂದ ಖಾಸಗಿ ಬಸ್ ಗೆ ಬೆಂಕಿ ತಗುಲಿ ಬಸ್ ಸುಟ್ಟು ಕರಕಲಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಇರುವ ಕೆಂಚಟಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯಾಂತ್ರಿಕ ದೋಷದಿಂದ ಖಾಸಗಿ ಬಸ್ ಬೆಂಕಿ ಆಹುತಿಯಾಗಿ, ಸಂಪೂರ್ಣ ಸುಟ್ಟು ಕರಕಲಾಗಿದೆ. ಚಾಲಕನ ಸಮಯ‌ ಪ್ರಜ್ಞೆಯಿಂದ  ಭಾರೀ ಅನಾಹುತ ತಪ್ಪಿದೆ.

ಸ್ಲೀಪರ್ ಕೋಚ್ ಬಸ್ ಮಂಗಳೂರಿನಿಂದ  ಬೆಂಗಳೂರಿಗೆ ತೆರಳುತಿತ್ತು. 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು, ತಕ್ಷಣ ಬಸ್ ಪಕ್ಕಕ್ಕೆ ನಿಲ್ಲಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದು, ಹಾಸನ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

NO COMMENTS

LEAVE A REPLY