ಮಾನಸ ಗಂಗೋತ್ರಿಯಲ್ಲಿ ರಸ್ತೆ ಅಪಘಾತ

ಮಾನಸ ಗಂಗೋತ್ರಿಯಲ್ಲಿ ರಸ್ತೆ ಅಪಘಾತ

300
0
SHARE

ಮೈಸೂರು(ನ,21,2017):ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ.

ಮಾನಸ ಗಂಗೋತ್ರಿಯ ಭೂ ವಿಜ್ಞಾನ ವಿಭಾಗದ ಮುಂದೆ ಘಟನೆ ಸಂಭವಿಸಿದೆ. ಆರ್ಕಿಟೆಕ್ಚರ್ ವಿಭಾಗದಿಂದ ಬರುತ್ತಿದ್ದ ಕಾರಿಗೂ ಹಾಗೂ ಜೆಸಿ ಕಾಲೇಜು ರಸ್ತೆಯಿಂದ ಬರುತ್ತಿದ್ದ ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಸ್ಕೂಟರ್ ನಲ್ಲಿದ್ದ ದಂಪತಿಗಳಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಕೂಡಲೇ ಆಸ್ಪತ್ರೆಗೆ ದಾಖಲಾಸಿದ್ದಾರೆ. ಆರ್ಕಿಟೆಕ್ಚರ್ ವಿದ್ಯಾರ್ಥಿಯು ಕಾರು ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.

ಈ ಕುರಿತು ಸ್ಥಳಕ್ಕೆ ಆಗಮಿಸಿದ ವಿವಿ ಪುರಂ ಪೋಲಿಸರು ವಿದ್ಯಾರ್ಥಿ ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
– ಚಂದ್ರಶೇಖರ್ ಬಿ,ಎನ್

NO COMMENTS

LEAVE A REPLY