ಬುದ್ದಿಮಾಂದ್ಯೆ ಮಗಳು: ಪೋಷಕರು ಆತ್ಮಹತ್ಯೆ

ಬುದ್ದಿಮಾಂದ್ಯೆ ಮಗಳು: ಪೋಷಕರು ಆತ್ಮಹತ್ಯೆ

239
0
SHARE

ಶಿವಮೊಗ್ಗ(ನ,20,2017):ಮಗಳು ಬುದ್ದಿಮಾಂದ್ಯೆ ಎಂಬ ಕಾರಣಕ್ಕೆ ಮನನೊಂದ ದಂಪತಿ ಮಗಳ ಜತೆ ತಾವು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗನಗರದ ಅಶೋಕ ರಸ್ತೆಯ ನಿವಾಸಿಯಾದ ಪ್ರದಾನಪ್ಪ(52), ಗೌರಮ್ಮ(49), ಹಾಗೂ ಪುತ್ರಿ ಸೌಮ್ಯ(23) ವಿಷಸೇವಿಸಿ ಮೃತಪಟ್ಟವರು. ಪುತ್ರಿ ಸೌಮ್ಯ ಬುದ್ದಿಮಾಂದ್ಯಳಾಗಿದ್ದು, ಚಿಕಿತ್ಸೆ ನೀಡಿದರೂ ಸರಿಹೋಗಲಿಲ್ಲ ಎಂದು ಮನನೊಂದ ದಂಪತಿಗಳು ನವೆಂಬರ್ 17ರಂದು ನಗರದ ಹೊರವಲಯದ  ಗುಡ್ಡೇಕಲ್ ಬಳಿ ವಿಷ ಸೇವಿಸಿದ್ದರು.

ಬಳಿಕ ಇವರನ್ನ ಆಸ್ಪತ್ರೆಗೆ ದಾಖಲಾಗಿಸಿತ್ತು. ಆದರೆ ಚಿಕಿತ್ಸೆ ಫಲಿಸದೆ ದಂಪತಿ ಹಾಗೂ ಪುತ್ರಿ ಮೂವರು ಇಂದು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಶೀವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY