ಕನ್ನಡ ಸಾಹಿತ್ಯ ಸಮ್ಮೆಳನ: ಶಾಲಾ ಕಾಲೇಜುಗಳಿಗೆ ರಜೆ

ಕನ್ನಡ ಸಾಹಿತ್ಯ ಸಮ್ಮೆಳನ: ಶಾಲಾ ಕಾಲೇಜುಗಳಿಗೆ ರಜೆ

246
0
SHARE

ಮೈಸೂರು(ನ,19,2017):ಮೈಸೂರಿನಲ್ಲಿ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಹಿನ್ನೆಲೆ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ನವಂಬರ್ 24,25,26 ರಂದು ನುಡಿಹಬ್ಬ ನಡೆಯಲಿದ್ದು, ಈ ಮೂರು ದಿನಗಳ ಕಾಲ ಮೈಸೂರು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಪಿಯು ಉಪ ನಿರ್ದೇಶಕಿ ಮಂಜುಳ ಅವರು ರಜೆ ಘೋಷಿಸಿದ್ದಾರೆ.

ಇತ್ತೀಚೆಗಷ್ಠೆ ಮೈಸೂರು ವಿವಿಯ ಪದವಿ ಪರೀಕ್ಷೆಗಳನ್ನ ಮುಂದೂಡಿ ಆದೇಶ ಹೊರಡಿಸಲಾಗಿತ್ತು.ಕನ್ನಡಾಂಬೆಯ ನುಡಿ ಹಬ್ಬದಲ್ಲಿ ಎಲ್ಲಾ ವರ್ಗದವರು ಭಾಗಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಈ ಕ್ರಮ ಕೈಗೊಂಡಿದೆ.

NO COMMENTS

LEAVE A REPLY