ಮೈಸೂರು ವಿವಿಯಲ್ಲಿ ಬಾಬಾ ಸಾಹೇಬರ ಪುತ್ಥಳಿ ಲೋಕಾರ್ಪಣೆ

ಮೈಸೂರು ವಿವಿಯಲ್ಲಿ ಬಾಬಾ ಸಾಹೇಬರ ಪುತ್ಥಳಿ ಲೋಕಾರ್ಪಣೆ

247
0
SHARE

ಮೈಸೂರು(ನ,19,2017):ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಡಾ.ಬಿ,ಆರ್ ಅಂಬೇಡ್ಕರ್ ರವರ ಪುತ್ಥಳಿಯನ್ನ ಇಂದು ಲೋಕಾರ್ಪಣೆ ಮಾಡಲಾಯಿತು.

ವಿಶ್ವ ಕಂಡ ಅತ್ಯಂತ ಶ್ರೇಷ್ಠ ತತ್ವಜ್ಞಾನಿ ಡಾ.ಬಿ,ಆರ್ ಅಂಬೇಡ್ಕರ್ ರವರ ಪುತ್ಥಳಿಯನ್ನು ಮಾನ್ಯ ಲೋಕೋಪಯೋಗಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್,ಸಿ ಮಹದೇವಪ್ಪ ರವರು ಹಾಗೂ ಲೋಕಸಭಾ ಸದಸ್ಯರಾದ ಆರ್.ದ್ರುವನಾರಯಣ್ ರವರ ಅಮೃತಸ್ತದಿಂದ ಮಾನಸ ಗಂಗೋತ್ರಿಯ ಗ್ರಂಥಾಲಯದ ಮುಂದೆ ಅನಾವರಣ ಮಾಡಲಾಯಿತು.

ಈ ಕುರಿತು ಮಾತನಾಡಿದ ಹೆಚ್, ಸಿ ಮಹದೇವಪ್ಪ ರವರು ಬುದ್ಧ,ಬಸವ,ಅಂಬೇಡ್ಕರ್ ರನ್ನು ಜಾತಿಯಿಂದ ಗುರುತಿಸುವರು ಕೊಳಕು ಮನುಸುಗಳು ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಸಂವಿಧಾನವನ್ನು ಬದಲಾವಣೆ ಮಾಡುವ ಸೂಚನೆ ಕಾಣುತ್ತದೆ, ಮನುಸ್ಮೃತಿ ಜೀವಂತವಾಗಿ ಎಡೆಬಿಚ್ಚಿದೆ ಹಾಗಾಗಿ ಬಹುಸಂಸ್ಕೃತಿ ದೇಶದಲ್ಲಿ ಕೈಕಟ್ಟಿ ಕೂರಬೇಡಿ, ಬಲಾಡ್ಯರಿಂದ ಬಲಹೀನರನ್ನು ರಕ್ಷಿಸುವ ಶಕ್ತಿ ಮೈಸೂರು ವಿವಿ ಯಿಂದಲೇ ಪ್ರಾರಂಭವಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮಲ್ಲಿ ಡಾ. ಹೆಚ್,ಸಿ ಮಹದೇವಪ್ಪ, ಆರ್.ದ್ರುವನಾರಯಣ್, ಬೌದ್ಧಗುರು ಮೋದಿ ದತ್ತ ಬಂತೇಜಿ, ಮಾಜಿ ಮೇಯರ್ ಪುರುಶೋತ್ತಮ್, ಪ್ರಭಾರ ಕುಲಪತಿಗಳಾದ ಪ್ರೋ, ದಯಾನಂದ ಮಾನೆ, ಕುಲಸಚಿವರಾದ ಡಿ.ಭಾರತಿ, ಮತ್ತು ಸಿಂಡಿಕೇಟ್ ಸಭೆಯ ಸದಸ್ಯರುಗಳು ಉಪಸ್ಥಿತರಿದ್ದರು.
– ಚಂದ್ರಶೇಖರ್ ಬಿ.ಎನ್

NO COMMENTS

LEAVE A REPLY