ಕೋರ್ಟ್ ಆವರಣದಲ್ಲೇ ವಕೀಲರಿಬ್ಬರಿಗೆ ಚಾಕುವಿನಿಂದ ಇರಿತ

ಕೋರ್ಟ್ ಆವರಣದಲ್ಲೇ ವಕೀಲರಿಬ್ಬರಿಗೆ ಚಾಕುವಿನಿಂದ ಇರಿತ

82
0
SHARE

ತುಮಕೂರು(ನ,18,2017):ಕಕ್ಷಿದಾರನೋಬ್ಬ ಇಬ್ಬರು ವಕೀಲರಿಗೆ ಚಾಕುವಿನಿಂದ ಇರಿದಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಜೆಎಂಎಫ್ ಸಿ ಕೋರ್ಟ್ ಆವರಣದಲ್ಲಿ ನಡೆದಿದೆ.

ಹರ್ಷ ಹಾಗೂ ಶಿವಕುಮಾರ್ ಚಾಕುವಿನಿಂದ ಇರಿತಕ್ಕೊಳಗಾದ ವಕೀಲರು. ಕಕ್ಷಿದಾರ ಭೈರೇಗೌಡ ಎಂಬಾತನೇ ಇಬ್ಬರು ವಕೀಲರಿಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗುತ್ತಿದೆ. ಈ ವಕೀಲರಿಬ್ಬರು ಭೈರೇಗೌಡನ ಕೌಟುಂಬಿಕ ಕಲಹದ ಮಧ್ಯಸ್ಥಿಕೆ ವಹಿಸಿದ್ದರು. ಈ ನಡುವೆ ನ್ಯಾಯ ತಿರ್ಮಾನದಲ್ಲಿ ಅನ್ಯಾಯ ಆಗಿದೆ ಎಂದು ಕಕ್ಷಿದಾರ ಭೈರೇಗೌಡ ತನ್ನ ಸಹಚರರೊಂದಿಗೆ ಇಬ್ಬರು ವಕೀಲರಿಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ಆರೋಪಿ ಭೈರೇಗೌಡ ಹಾಗೂ ಆತನ ಸಹಚರನನ್ನ ಪೊಲೀಸರು ಬಂಧಿಸಿದ್ದು, ಹರ್ಷ ಹಾಗೂ ಶಿವಕುಮಾರ್ ಅವರನ್ನ ಕುಣಿಗಲ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY