ಗೌರಿ ಹತ್ಯಾಕಾಂಡ : ಗಂಗೋತ್ರಿಯಲ್ಲಿ ನಮ್ಮಗೌರಿ ಸಾಕ್ಷ್ಯಚಿತ್ರ ಪ್ರದರ್ಶನ

ಗೌರಿ ಹತ್ಯಾಕಾಂಡ : ಗಂಗೋತ್ರಿಯಲ್ಲಿ ನಮ್ಮಗೌರಿ ಸಾಕ್ಷ್ಯಚಿತ್ರ ಪ್ರದರ್ಶನ

240
0
SHARE

ಮೈಸೂರು(ನ,17,2017):ಪತ್ರಕರ್ತೆ ಗೌರಿಲಂಕೇಶ್ ರವರ ಹತ್ಯೆ ಕುರಿತು,ಮೈಸೂರಿನ ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ನಮ್ಮಗೌರಿ ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಯಿತು.

ಇತ್ತೀಚೆಗೆ ನಡೆದ ದಿಟ್ಟ ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯನ್ನು ಖಂಡಿಸಿ ಹಲವಾರು ಪ್ರತಿಭಟನೆ ಮಾಡಲಾಗಿತ್ತು. ಅದರಂತೆಯೇ ಮೈಸೂರಿನ ಮಾನಸ ಗಂಗೋತ್ರಿಯ ವಿದ್ಯಾರ್ಥಿ ಒಕ್ಕೂಟವು ಆಯೋಜಿಸಲಾಗಿದ್ದ ನಮ್ಮಗೌರಿ ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಈ ನಡುವೆ ಅಧ್ಯಕ್ಷರ ಭಾಷಣದ ಸಂದರ್ಭದಲ್ಲಿ ಕರೆಂಟ್ ಹೋದ ಕಾರಣ ಮೈಕ್ ಸಹಾಯವಿಲ್ಲದೆ ಗೌರಿ ಹತ್ಯೆಯನ್ನು ಕುರಿತು ಮಾತನಾಡಿದ ಪ್ರೊ.ಬಿ.ಪಿ ಮಹೇಶ್ ಚಂದ್ರ ಗುರು ರವರ ಭಾಷಣವು ಎಲ್ಲಾ ವಿದ್ಯಾರ್ಥಿಗಳೂ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.

ಈ ಕಾರ್ಯಕ್ರಮಕ್ಕೆ ಮೈಸೂರು ವಿವಿ ಪ್ರಭಾರ ಕುಲಪತಿಗಳಾದ ಪ್ರೊ.ದಯಾನಂದ ಮಾನೆ, ಸಿಂಡಿಕೇಟ್ ಸಭೆಯ ಅಧ್ಯಕ್ಷರಾದ ಕೆ.ಎಸ್ ಶಿವರಾಮು, ಪ್ರೊ.ಬಿ.ಪಿ ಮಹೇಶ್ ಚಂದ್ರ ಗುರು ಹಾಗೂ ಕೆ.ಎಸ್ ಭಗವಾನ್ ಮತ್ತು ಸಾಕ್ಷ್ಯಚಿತ್ರ ನಿರ್ದೆಶಕರಾದ ದೀಪು ಉಪಸ್ಥಿತರಿದ್ದರು.

ವಿಷೇಶವಾಗಿ ಮೊದಲ ಬಾರಿಗೆ ಮಾನಸ ಗಂಗೋತ್ರಿ ಕ್ಲಾಕ್ ಟವರ್ ನ ಬಯಲಲ್ಲಿ ಏರ್ಪಡಿನಿದ್ದ, ಈ ಕಾರ್ಯಕ್ರಮಕ್ಕೆ ಐನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದ್ದು, ಅತ್ಯುತ್ತಮವಾಗಿ ಯಶಸ್ವಿಗೊಳಿಸಲಾಯಿತು.
– ಚಂದ್ರಶೇಖರ್ ಬಿ.ಎನ್

NO COMMENTS

LEAVE A REPLY