ಮೈಸೂರು ಜೆ.ಕೆ ಟೈರ್ಸ್ ಕಾರ್ಖಾನೆ: ಕಾರ್ಮಿಕ ಸಾವು

ಮೈಸೂರು ಜೆ.ಕೆ ಟೈರ್ಸ್ ಕಾರ್ಖಾನೆ: ಕಾರ್ಮಿಕ ಸಾವು

202
0
SHARE

ಮೈಸೂರು(ನ,16,2017):ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನ ಜೆ.ಕೆ ಟೈರ್ಸ್ ಕಾರ್ಖಾನೆಯಲ್ಲಿ ನಡೆದಿದೆ.

ಕೆ.ಆರ್ ಎಸ್ ರಸ್ತೆಯಲ್ಲಿರುವ ಜೆ.ಕೆ ಟೈರ್ಸ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಸುಣ್ಣದ ಕೇರಿಯ ರವಿ ಸಾವನ್ನಪ್ಪಿದ ವ್ಯಕ್ತಿ. ಜೆ ಕೆ ಟೈರ್ಸ್ ಕಾರ್ಖಾನೆಯಲ್ಲಿ ಗುತ್ತಿಗೆ ಆದಾರದ ಮೇಲೆ ರವಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಪಾಳಿ ಕೆಲಸ ಮಾಡುವಾಗ ರಬ್ಬರ್ ಮಿಕ್ಸಿಂಗ್ ವಿಭಾಗದಲ್ಲಿ ಈ ಅವಘಡ ಸಂಭವಿಸಿದೆ. ದೇಹದ ಅರ್ಧ ಭಾಗ ರಬ್ಬರ್ ನಿಂದ ದಹಿಸಿ ಹೋಗಿರುವ ಸಾಧ್ಯತೆ. ಈ ಕುರಿತು ವಿಚಾರ ತಿಳಿದ ತಕ್ಷಣ  ಮೇಟಗಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯಿಂದಾಗಿ ಕಾರ್ಖಾನೆ ಮುಂದೆ ಕಾರ್ಮಿಕರು ಒಗ್ಗೂಡಿ, ಕಾರ್ಮಿಕರಿಗೆ ಸೂಕ್ತ ರಕ್ಷಣೆ ಇಲ್ಲದೇ ಇರೋದೆ ಈ ಸಾವಿಗೆ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

NO COMMENTS

LEAVE A REPLY