ಕನ್ನಡ ಸಾಹಿತ್ಯ ಸಮ್ಮೇಳನ ವೆಚ್ಚದಲ್ಲಿ ಪಾರದರ್ಶಕತೆ ಕಾಯಲು ಸಮಿತಿ ರಚನೆ

ಕನ್ನಡ ಸಾಹಿತ್ಯ ಸಮ್ಮೇಳನ ವೆಚ್ಚದಲ್ಲಿ ಪಾರದರ್ಶಕತೆ ಕಾಯಲು ಸಮಿತಿ ರಚನೆ

203
0
SHARE

ಮೈಸೂರು (ನ,15,2017):ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ಮೇಲೆ ಸಂಪೂರ್ಣ ನಿಗಾ ಇರಿಸಲು ಅಂದಾಜು‌ ಸಮಿತಿ ರಚನೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಈ ಕುರಿತು ಮಾತನಾಡಿದ ಡಿಸಿ ರಂದೀಪ್ ರವರು ಲೋಕೋಪಯೋಗಿ‌ ಹಾಗೂ‌ ನಗರಪಾಲಿಕೆಯ ಇಂಜಿನಿಯರ್ಸ್ ಗಳನ್ನು ಒಳಗೊಂಡ ಅಧಿಕಾರಿಗಳ ತಂಡದ ಅಂದಾಜಿ ಸಮಿತಿ ರಚಿಸಲಾಗಿದೆ. ಖರ್ಚು ವೆಚ್ಚದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

ಕನ್ನಡ ರಥ ನಕಲಿಯಾದ ಬಗ್ಗೆ ಜಿಲ್ಲಾ ಕಸಾಪ ಅಧ್ಯಕ್ಷರಿಗೆ ಪತ್ರ ಬರೆದು ವಿವರಣೆ ಕೋರಲಾಗಿದೆ. ಸರ್ಕಾರದ ಅನುದಾನದ ಜೊತೆ ಸಾರ್ವಜನಿಕರು ನೀಡುವ ವಂತಿಕೆ ಸ್ವೀಕರಿಸಲು ಒಂದೇ ಖಾತೆ ನಿರ್ವಹಣೆಮಾಡಲಾಗುತ್ತದೆ. ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಡಿಸಿ ಜಂಟಿ ಖಾತೆಗೆ ಮಾತ್ರ ವಂತಿಕೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ ಎಂದು ಡಿ.‌ರಂದೀಪ್‌ ತಿಳಿಸಿದರು.

NO COMMENTS

LEAVE A REPLY