ಮೈಸೂರಿನಲ್ಲಿ ಬಿಳಿ ಬಣ್ಣದ ಕಾಗೆ ಪತ್ತೆ

ಮೈಸೂರಿನಲ್ಲಿ ಬಿಳಿ ಬಣ್ಣದ ಕಾಗೆ ಪತ್ತೆ

214
0
SHARE

ಮೈಸೂರು(ನ.15.2017):ಮೈಸೂರಿನಲ್ಲಿ ಬಿಳಿ ಬಣ್ಣದ ಪುಕ್ಕ ಹೊಂದಿರುವ ಬಿಳಿಕಾಗೆ ಪತ್ತೆಯಾಗಿ ಜನರಲ್ಲಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.

ನಗರದ ಕೆ.ಆರ್‌.ಆಸ್ಪತ್ರೆ ಆವರಣದಲ್ಲಿ ಈ ಬಿಳಿ ಕಾಗೆ ಒಂದೂವರೆ ತಿಂಗಳಿಂದ ಬೀಡು ಬಿಟ್ಟಿದೆ.ಹವ್ಯಾಸಿ ಪಕ್ಷಿ ವೀಕ್ಷಕರು,ವನ್ಯಜೀವಿ ಛಾಯಾಗ್ರಹಕರಿಗೆ ಬಿಳಿ ಕಾಗೆಯನ್ನು ನೋಡಿ ಆಶ್ಚರ್ಯವುಂಟಾಗಿದ್ದು, ಜೀನ್ ವ್ಯತ್ಯಾಸಗಳಿಂದ ಕಾಗೆಯ ಪುಕ್ಕಗಳ ಕಲರ್ ಬಿಳಿಬಣ್ಣಕ್ಕೆ ತಿರುಗಿದೆ.

ಇದರಲ್ಲಿ ಯಾವುದೇ ವಿಶೇಷವಿಲ್ಲ. ಹಿಂದೆಯೂ ಹಲವಾರು ಬಾರಿ ಇಂತಹ ಪಕ್ಷಿಗಳು ಕಾಣಿಸಿವೆ ಎಂದು ಪಕ್ಷಿ ವೀಕ್ಷಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

NO COMMENTS

LEAVE A REPLY