ಮೈಸೂರಿನಲ್ಲಿ ಎರಡು ದಿನಗಳ ಕಾಲ ಕುಡಿಯುವ ನೀರು ಸ್ಥಗಿತ

ಮೈಸೂರಿನಲ್ಲಿ ಎರಡು ದಿನಗಳ ಕಾಲ ಕುಡಿಯುವ ನೀರು ಸ್ಥಗಿತ

215
0
SHARE

ಮೈಸೂರು(ನ.14,2017):ನಗರದದಲ್ಲಿ ಬುಧವಾರ ಮತ್ತು ಗುರುವಾರ (ನ.15,16) ಎರಡು ದಿನಗಳ ಕಾಲ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಈ ಸಂಬಂಧ ಪ್ರಕಟಣೆ ನೀಡಿರುವ ಮೈಸೂರು ಮಹಾನಗರ ಪಾಲಿಕೆ, ಕಬಿನಿ ನೀರು ಸರಬರಾಜು ಮಾಡುವ ತಾತ್ಕಾಲಿಕ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಸ್ಥಗಿತ ಅನಿವಾರ್ಯ ಎಂದು ಸ್ಪಷ್ಟಪಡಿಸಿದೆ.

ರಿಂಗ್ ರೋಡ್ ಬಳಿ ಫ್ಲೋ‌ಮೀಟರ್ ಅಳವಡಿಕೆ ಕಾರ್ಯ ನಡೆಯಲಿದ್ದು, ನಾಳೆ ಮತ್ತು ನಾಳಿದ್ದು ಎರಡು ದಿನ ನಗರದ ನಲ್ಲಿಗಳಲ್ಲಿ ‌ನೀರು ಪೂರೈಕೆಯಾಗದು ಎಂದು ಮೈಸೂರು ಮಹಾ ನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ಮೈಸೂರು ನಗರದ 21 ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಕುಡಿಯುವ ನೀರು ಪೂರೈಕೆಯಾಗದು. ಜತೆಗೆ ದಟ್ಟಗಳ್ಳಿ‌ ಬಡಾವಣೆಗೂ ನೀರು ಪೂರೈಕೆ ಸ್ಥಗಿತವಾಗಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಪಾಲಿಕೆ ಮನವಿ ಮಾಡಿದೆ.

NO COMMENTS

LEAVE A REPLY