ಪ್ರಜಾಕೀಯ ಪಕ್ಷಕ್ಕೆ ಮೈಸೂರು ರಾಜವಂಶಸ್ಥರ ಬೆಂಬಲ

ಪ್ರಜಾಕೀಯ ಪಕ್ಷಕ್ಕೆ ಮೈಸೂರು ರಾಜವಂಶಸ್ಥರ ಬೆಂಬಲ

211
0
SHARE

ಚಾಮರಾಜನಗರ(ನ,13,2017):ಇತ್ತೀಚೆಗಷ್ಟೇ ಹಲವು ಚರ್ಚೆಗೆ ಗ್ರಾಸವಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಸ್ಥಾಪಿಸಿದ ಪ್ರಜಾಕೀಯ ಪಕ್ಷಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಬೆಂಬಲ ಸೂಚಿಸಿದ್ದಾರೆ.

ನಟ ಉಪೇಂದ್ರ ಅವರು ಹೊಸ ಹೊಸ ಆಲೋಚನೆ ಇಟ್ಟುಕೊಂಡು ಪಕ್ಷ ಕಟ್ಟಿದ್ದಾರೆ. ಅವರು ಇಂಡಿಪೆಂಡೆಂಟಾಗಿ ಮಾಡ್ತಾ ಇರೋದು ಒಳ್ಳೆಯದು ಎಂದು ರಾಜವಂಶಸ್ಥ ಯದುವೀರ್ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಮಾತನಾಡಿದ ಯದುವೀರ್, ಕರ್ನಾಟಕಕ್ಕೆ ಹೊಸ ಆಲೋಚನೆ ಬೇಕಿತ್ತು. ಈ ಹೊಸ ಆಲೋಚನೆ ನಟ ಉಪೇಂದ್ರ ಅವರು ಮಾಡಿದ್ದಾರೆ. ಪ್ರಜಾಕೀಯ ಪಕ್ಷ ಕಟ್ಟಿದ್ದು,ಈ ಮೂಲಕ ಜನರಿಗೆ ಒಳ್ಳೆಯದನ್ನು ಮಾಡಲಿ ಎಂದು ತಿಳಿಸಿದರು.

NO COMMENTS

LEAVE A REPLY