ಕನಕಗಿರಿಯಲ್ಲೊಂದು ಸೃಷ್ಟಿ ವೈಚಿತ್ರ್ಯ, ಅರಳೀ ವೃಕ್ಷದಲ್ಲಿ ಮೂಡಿದ ಗಣಪನ ಆಕೃತಿ

ಕನಕಗಿರಿಯಲ್ಲೊಂದು ಸೃಷ್ಟಿ ವೈಚಿತ್ರ್ಯ, ಅರಳೀ ವೃಕ್ಷದಲ್ಲಿ ಮೂಡಿದ ಗಣಪನ ಆಕೃತಿ

202
0
SHARE

ಮೈಸೂರು(ನ.13.2017):ಅರಳೀ ವೃಕ್ಷದಲ್ಲಿ ಗಣಪನ ಮುಖಭಾವ ಉದ್ಭವಗೊಂಡು ಆಶ್ಚರ್ಯಚಕಿತಗೊಳಿಸಿದೆ.

ರಾತ್ರೋರಾತ್ರಿ ಈ ಪವಾಡ ನಡೆದಿದೆ ಎಂದು ನಂಬಿರುವ ಗಣಪನ ಭಕ್ತರು ಈಗ ಸಾಲು-ಸಾಲಾಗಿ ವೃಕ್ಷದ ದರ್ಶನಕ್ಕೆ ಮುಗಿಬೀಳುತ್ತಿದ್ದಾರೆ. ಹೀಗೆ ಅರಳಿ ವೃಕ್ಷದಲ್ಲಿ ಗಣಪನ ಆಕೃತಿ ಕಾಣಿಸಿಕೊಂಡಿರುವುದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಇಲ್ಲಿನ ಕನಕಗಿರಿ ಬಡಾವಣೆಯಲ್ಲಿರುವ ಶಕ್ತಿ ಗಣಪತಿ ದೇವಾಲಯದ ಆವರಣದಲ್ಲೇ ಇರುವ ಭಾರೀ ಗಾತ್ರದ ಅರಳೀ ವೃಕ್ಷದಲ್ಲಿ ಗಣಪತಿ ಮುಖ ಹೋಲುವಂತಹ ಆಕೃತಿ ಕಾಣಿಸಿಕೊಂಡಿದೆ.

ಪ್ರತಿನಿತ್ಯ ಭಕ್ತರು ದೇವಾಲಯಕ್ಕೆ ಬಂದು ಅರಳೀ ವೃಕ್ಷ ಪ್ರದಕ್ಷಿಣೆ ಹಾಕುತ್ತಾರೆ. ಹಿಂದೆ ಯಾವಾಗಲು ವೃಕ್ಷದಲ್ಲಿ ಇಂತಹ ಆಕೃತಿ ಇರಲಿಲ್ಲ. ನಿನ್ನೆ ರಾತ್ರಿಯಿಂದೀಚೆಗೆ ಮುಖ ಭಾವ ಕಾಣಿಸಿಕೊಂಡಿದ್ದು, ಸೊಂಡಿಲು ಪರಿಪೂರ್ಣವಾಗಿ ಕಾಣಿಸುತ್ತಿದ್ದರೆ, ಒಂದು ಕಣ್ಣು ತೆರೆದಿರುವಂತೆಯೂ ಕಂಡುಬರುತ್ತಿದೆ. ಇದು ದೈವ ಶಕ್ತಿಯ ಪ್ರತೀಕ ಅಂತಾ ನಂಬಿರುವ ಬಡಾವಣೆಯ ಸುತ್ತಮುತ್ತಲಿನ ಜನ ಈಗ ಅರಳೀ ವೃಕ್ಷದ ದರ್ಶನಕ್ಕಾಗಿ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

NO COMMENTS

LEAVE A REPLY