ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಎಂಟು ಕಡೆ ಹೆಲಿಪ್ಯಾಡ್‌ಗಳ ನಿರ್ಮಾಣ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಎಂಟು ಕಡೆ ಹೆಲಿಪ್ಯಾಡ್‌ಗಳ ನಿರ್ಮಾಣ

235
0
SHARE

ಬೆಂಗಳೂರು(ನ,12,2017) :ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಕಡಿವಾಣ ಹಾಕುಲು ಹಾಗೂ ತುರ್ತು ಸಂದರ್ಭಗಳಲ್ಲಿ ಗಣ್ಯರು ಭೇಟಿ ನೀಡಿದಾಗ ಸಂಚಾರಕ್ಕೆ ಅನುಕೂಲವಾಗುವಂತೆ ನಗರದ ಸುತ್ತಲೂ ಎಂಟು ಹೆಲಿಪ್ಯಾಡ್‌ ನಿರ್ಮಾಣ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ನಗರದ ಎಂಟೂ ದಿಕ್ಕಿನಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸುವ ಸಂಬಂಧ ಮುಂಬರುವ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.ಈ ಹೆಲಿಪ್ಯಾಡ್‌ಗಳಿಗೆ ಮಾಜಿ ಮೇಯರ್‌ಗಳ ಹೆಸರನ್ನು ಇಡಲಾಗುವುದು ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

ಹೆಲಿಪ್ಯಾಡ್‌ಗಳ ನಿರ್ಮಾಣದಿಂದ ತುರ್ತು ಆರೋಗ್ಯ ಸೇವೆ ಕಲ್ಪಿಸಲು ಸಾಧ್ಯವಾಗಲಿದೆ. ಹಾಗೂ ನಗರಕ್ಕೆ ಭೇಟಿ ನೀಡುವ ಗಣ್ಯರಿಗೆ ಈ ಹೆಲಿಪ್ಯಾಡ್‌ಗಳಿಂದ ಸೇವೆ ಒದಗಿಸಬಹುದಾಗಿದೆ. ಇದರಿಂದ ಗಣ್ಯರ ಆಗಮನದ ವೇಳೆ ಜನರು ಸಂಚಾರ ದಟ್ಟಣೆಯ ಸಮಸ್ಯೆಯಲ್ಲಿ ಸಿಲುಕಿ ತೊಂದರೆ ಅನುಭವಿಸುವುದು ತಪ್ಪಲಿದೆ. ಅಲ್ಲದೇ ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಹೆಲಿಪ್ಯಾಡ್‌ಗಳು ತುಂಬಾ ಸಹಕಾರಿಯಾಗಲಿವೆ ಎಂದು ತಿಳಿಸಿದರು.

NO COMMENTS

LEAVE A REPLY