ರಾಜ್ಯದಲ್ಲಿ ಟಿಪ್ಪು ಜಯಂತಿ ಶಾಂತಿಯುತವಾಗಿ ನಡೆದಿದೆ: ಸಿ ಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಟಿಪ್ಪು ಜಯಂತಿ ಶಾಂತಿಯುತವಾಗಿ ನಡೆದಿದೆ: ಸಿ ಎಂ ಸಿದ್ದರಾಮಯ್ಯ

182
0
SHARE

ಕೊಪ್ಪಳ(ನ,11,2017):  ರಾಜ್ಯಾದ್ಯಂತ ನಡೆದ ಟಿಪ್ಪು ಜಯಂತಿ ಶಾಂತಿಯುತವಾಗಿ ನಡೆದಿದೆ ಎಲ್ಲೊ ಒಂದು ಕಡೆ ಕಲ್ಲು ತೂರಾಟ ನಡೆದಿದೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕೊಪ್ಪಳದ ಬಸಾಪುರ ಏರ್ ಪೋರ್ಟ್ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಬಂಧನ ಸಂಬಂಧ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ದ  ಅಲ್ಲಿನ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಒಟ್ಟಾರೆ ಟಿಪ್ಪು ಜಯಂತಿ ಯಶಸ್ವಿಯಾಗಿದೆ ಎಂದರು.

ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ಮಾಜಿ ಎಂಎಲ್ ಸಿ ಶ್ರೀನಾಥ್ ನಡುವಿನ ಕಿತ್ತಾಟ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಪರಸ್ಪರ ಒಬ್ಬನೊಬ್ಬರು ಕೆಳಮಟ್ಟದಲ್ಲಿ  ಮಾತನಾಡಿರುವುದು ಸರಿಯಲ್ಲ. ಈ ಬಗ್ಗೆ ಅನ್ಸಾರಿ ಜತೆ ಮಾತನಾಡುತ್ತೇನೆ. ಅನ್ಸಾರಿ ಕಾಂಗ್ರೆಸ್ ಗೆ ಬರೋದು ಖಚಿತ. ಕಾಂಗ್ರೆಸ್ ಬಂದ ಮೇಲೆ ಗನ್ ಮ್ಯಾನ್ ಆಗಲಿದ್ದಾರೆ ಎಂದು ಸ್ವಷ್ಟನೆ ನೀಡಿದರು.

NO COMMENTS

LEAVE A REPLY