ಟಿಪ್ಪು ಜಯಂತಿ ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ: ಸಚಿವ ಎಚ್.ಸಿ.ಮಹಾದೇವಪ್ಪ

ಟಿಪ್ಪು ಜಯಂತಿ ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ: ಸಚಿವ ಎಚ್.ಸಿ.ಮಹಾದೇವಪ್ಪ

225
0
SHARE

ಮೈಸೂರು(ನ.10, 2017): ಮೈಸೂರು ಹುಲಿ ಟಿಪ್ಪು ಸುಲ್ತಾನ್, ಹಿಂದೂ ಮತ್ತು ಮುಸ್ಲೀಮರ ನಡುವಿನ ಸಾಮರಸ್ಯದ ಕೊಂಡಿಯಂತಿದ್ದರು ಎಂಬ ಮಹಾತ್ಮಗಾಂಧಿ ಅವರ ಹೇಳಿಕೆಯನ್ನು ಕೋಮುವಾದಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹಿತನುಡಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಡಾ.ಎಚ್,ಸಿ ಮಹಾದೇವಪ್ಪ ರವರು ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರು ತಮ್ಮ ಯಂಗ್ ಇಂಡಿಯಾ ಪುಸ್ತಕದಲ್ಲಿ ಟಿಪ್ಪು ಕುರಿತು ಬರೆಯುವಾಗ ಹಿಂದೂ-ಮುಸ್ಲೀಮರ ಸಾಮರಸ್ಯದ ಕೊಂಡಿಯಾಗಿದ್ದರು ಟಿಪ್ಪು ಸುಲ್ತಾನ್ ಎಂದು ಉಲ್ಲೇಖಿಸಿದ್ದಾರೆ. ಆದ್ದರಿಂದ ಇದನ್ನು ಓದಿಯಾದರು ಟಿಪ್ಪು ಜಯಂತಿ ವಿರೋಧಿಸುತ್ತಿರುವ ಕೋಮುವಾದಿ ಶಕ್ತಿಗಳು ಸತ್ಯಾಂಶವನ್ನು ಅರಿಯಬೇಕು ಎಂದು ಹೇಳಿದರು.

ಟಿಪ್ಪು ಜಯಂತಿ ಆಚರಣೆ ಯಾವುದೋ ಒಂದು ವರ್ಗದ ಜನರ ಒಲೈಕೆಗಾಗಿಯಾಗಲಿ ಅಥವಾ ರಾಜಕೀಯ ಲಾಭಕ್ಕಾಗಿಯಾಗಲಿ ಮಾಡುತ್ತಿಲ್ಲ. ಬದಲಿಗೆ ಬ್ರಿಟಿಷರ ವಿರುದ್ಧ ದನಿ ಎತ್ತಿದ್ದ, ಮೊಟ್ಟ ಮೊದಲ ಭಾರತೀಯ ಎಂಬ ಕಾರಣಕ್ಕಾಗಿ ಸರಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಆದರೆ ಬಿಜೆಪಿಯವರು ಇದರಲ್ಲೂ ಕೋಮು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಉದ್ದಕ್ಕೂ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ್ದು ಟಿಪ್ಪು ಸುಲ್ತಾನ್, ಆತ ಅದ್ಹೇಗೆ ಕನ್ನಡ ವಿರೋಧಿಯಾಗಲು ಸಾಧ್ಯ. ಆತ ವಾಸಿಸುತ್ತಿದ್ದ ಸ್ಥಳದಲ್ಲಿ ಹಿಂದೂ ದೇವಾಲಯಗಳಿವೆ. ಆತನ ಅಳ್ವಿಕೆಯ ವ್ಯಾಪ್ತಿಯಲ್ಲಿದ್ದ ದೇವಾಲಯಗಳಲ್ಲಿದ್ದ ಅಪಾರ ಸಂಪತ್ತು ಈಗಲೂ ದೇವಾಲಯದ ಸುಪರ್ದಿಯಲ್ಲೇ ಇದೆ. ಹಾಗಾಗಿ ಅದ್ಹೇಗೆ ಆತ ಹಿಂದೂ ವಿರೋಧಿಯಾಗಲು ಸಾಧ್ಯ ಎಂದು ಪ್ರಶ್ನಿಸಿದರು. ಸಮಾಜದಲ್ಲಿ ದ್ಷೇಷ ಹಾಗೂ ಕೋಮು ಭಾವನೆ ಉಂಟು ಮಾಡುವ ಸಲುವಾಗಿ ಬಿಜೆಪಿ ಮುಖಂಡರು ಟಿಪ್ಪು ಜಯಂತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಮಹಾದೇವಪ್ಪ ಕಿಡಿಕಾರಿದರು.

ವ್ಯವಸಾಯ ಮಾಡಲು ಸ್ವಂತ ಭೂಮಿ ಇಲ್ಲದೆ ವಂಚಿತರಾಗಿದ್ದ ಶೋಷಿತ ಸಮುದಾಯದ ರೈತರಿಗೆ ಉಳುವವನೆ ಭೂಮಿ ಒಡೆಯ ಎಂಬ ಭೂ ಸುಧಾರಣೆ ಪರಿಕಲ್ಪನೆಯನ್ನು ಶತಮಾನಗಳ ಹಿಂದೆಯೇ ಜಾರಿಗೆಗೊಳಿಸಿದ ಕೀರ್ತಿ ಟಿಪ್ಪು ಸುಲ್ತಾನ್ ರದ್ದು ಎಂದು ಸಚಿವ ಮಹಾದೇವಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಮುಸ್ಲಿಂ ಧರ್ಮಗುರು ಮಹಮದ್ ಜಕಾವುಲ್ಲಾ ಮೌಲಾನ ಸಾಬ್ ಮಾತನಾಡಿ,
ದೇಶದ ಹಿಂದು ಮುಸಾಲ್ಮಾನರು ಒಗ್ಗಟ್ಟಿನಿಂದ ಮುನ್ನಡೆದರೆ ಭಾರತ ವಿಶ್ವದ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವುದನ್ನು ತಡೆಯಲು ಯಾರಿಂದಲೂ ಆಗದು. ನಮ್ಮ ದೇಶಕ್ಕೆ ಬೇಕಿರುವುದು ಮಿಸೆಲ್,ಅಣುಬಾಂಬ್ ರಾಕೆಟ್ ಗಳಲ್ಲ. ಬದಲಿಗೆ ಅದನ್ನು ಮೀರಿಸುವ ಶಕ್ತಿ ದೇಶದ ಹಿಂದು ಮುಸ್ಲಿಂ ಬಾತೃತ್ವದಲ್ಲಿದೆ. ಈ ಬಾತೃತ್ವ ಸಂಬಂಧ ಬೆಸೆಯುವ ಬದಲು ಧರ್ಮದ ಹೆಸರಲ್ಲಿ ಒಗ್ಗಟ್ಟು ಒಡೆಯುವ ಕೆಲಸ ಕೆಲವರಿಂದ ನಡೆಯುತ್ತಿದೆ. ಆದರೆ ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟರು.

NO COMMENTS

LEAVE A REPLY