ಟಿಪ್ಪು ಸುಲ್ತಾನ್ ಅಪ್ಪಟ ದೇಶಪ್ರೇಮಿ,ಜಯಂತಿ ಆಚರಣೆ ಮಾಡಿದರೆ ತಪ್ಪೇನು: ಸಚಿವ ಎ.ಮಂಜು

ಟಿಪ್ಪು ಸುಲ್ತಾನ್ ಅಪ್ಪಟ ದೇಶಪ್ರೇಮಿ,ಜಯಂತಿ ಆಚರಣೆ ಮಾಡಿದರೆ ತಪ್ಪೇನು: ಸಚಿವ ಎ.ಮಂಜು

241
0
SHARE

ಹಾಸನ(ನ,10,2017):ಟಿಪ್ಪು ಸುಲ್ತಾನ್ ಮುಸ್ಲಿಂ ಅನ್ನುವುದಕ್ಕಿಂತ ಅವನೊಬ್ಬ ವೀರ, ಅಪ್ಪಟ ದೇಶಪ್ರೇಮಿ. ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿಯವರು ವಿರೋಧಸುತ್ತಿರುವುದು ಏಕೆ ಎಂಬುದನ್ನ ನೇರವಾಗಿ ಸ್ಪಷ್ಟಪಡಿಸಲಿ ಎಂದು ಪಶುಸಂಗೋಪನಾ ಸಚಿವ ಎ.ಮಂಜು ಹೇಳಿಕೆ ನೀಡಿದ್ದಾರೆ.

ಹಾಸನದಲ್ಲಿ ಟಿಪ್ಪು ಜಯಂತಿ ಆಚರಣೆ ಶಾಂತ ರೀತಿಯಲ್ಲಿ ಮಧ್ಯಾಹ 12 ಗಂಟೆ ವೇಳೆಗೆ ಮುಗಿಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಉಸ್ತುವಾರಿ ಸಚಿವ ಎ.ಮಂಜು, ನಾವು ಓಟ್ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಮಾಡುತಿದ್ದರೆ, ಬಿಜೆಪಿಯವರು ಬಹಿಷ್ಕರಿ ಸುತ್ತಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನೆ ಹಾಕಿದರು,

ಟಿಪ್ಪು ಮುಸ್ಲಿಂ ಅನ್ನುವುದಕ್ಕಿಂತ ಅವನೊಬ್ಬ ವೀರ,ಅಪ್ಪಟ ದೇಶಪ್ರೇಮಿ,ಹಲವು ವಿದ್ಯಾಮಾನಗಳ ಹರಿಕಾರ, ಮಹಾತ್ಮಗಾಂಧಿಗಿಂತ ಮುಂಚೆಯೇ‌ ಸ್ವಾತಂತ್ರ್ಯ ಕ್ಕಾಗಿ ಹೋರಾಟ ‌ಮಾಡಿದ್ದ, ಇಂಥ ವೀರನ ಜಯಂತಿ ಮಾಡಿದರೆ ತಪ್ಪೇನು, ಶೃಂಗೇರಿ ಮಠದವರು ಶೀಘ್ರ ಟಿಪ್ಪು ಕುರಿತ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಎ. ಮಂಜು ಒತ್ತಾಯಿಸಿದರು.

NO COMMENTS

LEAVE A REPLY