ಟಪ್ಪು ಜಯಂತಿ ಆಚರಣೆ ಹಿನ್ನಲೆ ಮಂಡ್ಯದಲ್ಲಿ ಬಿಗಿ ಬಂದೋಬಸ್ತ್

ಟಪ್ಪು ಜಯಂತಿ ಆಚರಣೆ ಹಿನ್ನಲೆ ಮಂಡ್ಯದಲ್ಲಿ ಬಿಗಿ ಬಂದೋಬಸ್ತ್

187
0
SHARE

ಮಂಡ್ಯ(ನ,10,2017):ಕರ್ನಾಟಕ ಸರ್ಕಾರ  ಇಂದು ಟಿಪ್ಪು ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ನಡೆಸುತ್ತಿದ್ದು,ಟಿಪ್ಪು ನಗರಿ ಶ್ರೀರಂಗಪಟ್ಟಣ ದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಟಿಪ್ಪು ಜಯಂತಿ ಆಚರಣೆ ವೇಳೆ ಅಹಿತಕರ ಘಟನೆ ನಡೆದರೇ ಅದರ ಪತ್ತೆಗಾಗಿ ಶ್ರೀರಂಗಪಟ್ಟಣದಲ್ಲಿ
ಸಿ.ಸಿ.ಟಿವಿ.ಅಳವಡಿಸಲಾಗಿದ್ದು, ವಿಷೇಶ ಪೋಲಿಸ್ ಪಡೆಗಳನ್ನು ನೇಮಿಸಲಾಗಿದೆ. ಜತೆಗೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.

ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಂಗಪಟ್ಟಣ ಮತ್ತು ಬೆಳ್ಳೂರಿನಲ್ಲಿ ಪೊಲೀಸ್ ಕಾಯ್ದೆಯಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಬೈಕ್ ರ್ಯಾಲಿಗೆ, ಖಾಸಗಿ ಸಮಾರಂಭ ಹಾಗೂ ಜಾಥಾ ಪೊಲೀಸ್ ಇಲಾಖೆ ಕಡಿವಾಣ ಹಾಕಿದೆ.

NO COMMENTS

LEAVE A REPLY