ಟಿಪ್ಪು ಜಯಂತಿ ಆಚರಣೆಗೆ ಅಡ್ಡಿ: ಬಿಜೆಪಿ ಮುಖಂಡರನ್ನು ಬಂಧಿಸಿದ ಪೋಲಿಸರು

ಟಿಪ್ಪು ಜಯಂತಿ ಆಚರಣೆಗೆ ಅಡ್ಡಿ: ಬಿಜೆಪಿ ಮುಖಂಡರನ್ನು ಬಂಧಿಸಿದ ಪೋಲಿಸರು

162
0
SHARE

ಪಾಂಡವಪುರ(ನ,10,2017):ರಾಜ್ಯದಲ್ಲಿ ಇಂದು ಆಚರಣೆ ಮಾಡುತ್ತಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ ಬಿಜೆಪಿ‌ ಅಧ್ಯಕ್ಷ ಪ.ಮಾ.ರಮೇಶ್, ಮುಖಂಡ ನವೀನ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಯುತ್ತಿದ್ದ ಟಿಪ್ಪು ಜಯಂತಿಗೆ ಬಿಜೆಪಿ ತಾಪಂ ಸದಸ್ಯೆ ಮಂಗಳ ನವೀನ್ ಕುಮಾರ್ ಆಗಮಿಸಿದರು. ಇವರೊಂದಿಗೆ ಬಿಜೆಪಿ ತಾಲೂಕು ಅಧ್ಯಕ್ಷ ಪ.ಮಾ.ರಮೇಶ ಮತ್ತು ತಾಪಂ ಸದಸ್ಯೆ ಮಂಗಳ ಅವರ ಪತಿ ನವೀನ್ ಕುಮಾರ್ ಜೊತೆಯಲ್ಲಿ ಆಗಮಿಸಿದರು.

ಈ ವೇಳೆ ಪೊಲೀಸರು ಕಾರ್ಯಕ್ರದಲ್ಲಿ ಒಳಗೆ ಹೋಗಲು ಅವಕಾಶ ಕಲ್ಪಿಸಲಿಲ್ಲ. ಇದರಿಂದ ಪ.ಮಾ.ರಮೇಶ್ ಹಾಗೂ ನವೀನ್ ಕುಮಾರ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಮುಂದಾದರು. ಇದರಿಂದಾಗಿ ಪೊಲೀಸರು ಪ.ಮಾ.ರಮೇಶ್ ಮತ್ತು ನವೀನ್ ಕುಮಾರ್ ಅವರನ್ನು ಬಂಧಿಸಿ ವಶಕ್ಕೆ ಪಡೆದರು.

NO COMMENTS

LEAVE A REPLY