ಅನೈತಿಕ ಚಟುವಟಿಕೆಗಳಿಗೆ ಅಡ್ಡವಾಗುತ್ತಿರುವ ಚಾಮುಂಡಿಬೆಟ್ಟ

ಅನೈತಿಕ ಚಟುವಟಿಕೆಗಳಿಗೆ ಅಡ್ಡವಾಗುತ್ತಿರುವ ಚಾಮುಂಡಿಬೆಟ್ಟ

165
0
SHARE

ಮೈಸೂರು(ನ,9,2017):ಆದಿಶಕ್ತಿ ಚಾಮುಂಡೇಶ್ವರಿ ತಾಯಿ ನೆಲೆಸಿರುವ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಗಾಂಜಾ ,ಮದ್ಯ ಸೇವನೆ ಮುಂತಾದ ಅನೈತಿಕ ಚಟುವಟಿಕೆಗಳಿಗೆ ಅಡ್ಡವಾಗಿ ಮಾರ್ಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ.

ಇತ್ತೀಚಿಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯುವಕನೋರ್ವನ ಹತ್ಯೆ ನಡೆದಿತ್ತು. ಈ ಘಟನೆ ಬಳಿಕ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಪ್ರತಿ ತಿಂಗಳು ಪೌರ್ಣಮಿಯಂದು ನಡೆಯುವ ವಿಶೇಷ ಪೂಜೆಗಳು ನಡೆಯುತ್ತದೆ. ಈ ವೇಳೆ ಪೂಜೆಗೆ ತೆರಳುವ ಪುಂಡರು ಬೆಟ್ಟದ ತಪ್ಪಲಿನ ದತ್ತಾತ್ರೇಯ ಮಠ, ಮಂಟಪಗಳಲ್ಲಿ ಮದ್ಯ, ಗಾಂಜ ಸೇವನೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಪೊಲೀಸ್ ಇಲಾಖೆಯಲ್ಲಿ ಜಾರಿಗೆ ತಂದಿದ್ದ ಪೊಲೀಸರ ಗಸ್ತು, ಆಪರೇಷನ್ ಚಾಮುಂಡಿ ನಿಂತು ಹೋಗಿದೆ. ಹೀಗಾಗಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿದ್ದು,ಮೊನ್ನೆಯಷ್ಟೆ ಗಾಂಜಾ ಸೇವನೆ ಬಳಿಕ ಯುವಕರ ನಡುವೆ ಗಲಾಟೆ ನಡೆದಿತ್ತು.ಘಟನೆಯಲ್ಲಿ ಯುವಕನ ಕೊಲೆಯಾಗಿತ್ತು. ಕೊಲೆ ತನಿಖೆ ನಡೆಸಿದ ಪೊಲೀಸರಿಗೆ ಗಾಂಜಾ ಮಾರಾಟ, ಸೇವನೆ ವಿಚಾರ ತಿಳಿದು ಬಂದಿತ್ತು.

ಮೈಸೂರಿನ ಮಂಡಿ,‌ಉದಯಗಿರಿ, ಎನ್.ಆರ್.ಮೊಹಲ್ಲಾ ಸೇರಿ ಹಲವೆಡೆಯಿಂದ ಗಾಂಜಾ ಮಾರುವವರು ಇಲ್ಲಿಗೆ ಆಗಮಿಸುತ್ತಾರೆ.ಇದರಿಂದ ಬೆಟ್ಟದ ತಪ್ಪಲು ಭಂಗೀಮಠ ಅಂತಲೇ ಕುಖ್ಯಾತಿ ಪಡೆಯುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಗೊತ್ತಿದ್ದೂ ಕಣ್ಮುಚ್ಚಿ‌ ಕುಳಿತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

NO COMMENTS

LEAVE A REPLY