ಶಾಲಾ ವಾಹನವೊಂದಲ್ಲಿ ಆಕಶ್ಮಿಕ ಬೆಂಕಿ:ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾವುತ

ಶಾಲಾ ವಾಹನವೊಂದಲ್ಲಿ ಆಕಶ್ಮಿಕ ಬೆಂಕಿ:ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾವುತ

267
0
SHARE

ಮೈಸೂರು(ನ,7,2017):ಶಾಲಾ ಮಕ್ಕಳನ್ನ ಕರೆದೊಯ್ಯುತ್ತಿದ್ದ ಶಾಲಾ ವಾಹನದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಕುವೆಂಪುನಗರದಲ್ಲಿ ಈ ಘಟನೆ ನಡೆದಿದ್ದು.ಖಾಸಗಿ ಶಾಲೆಯ  ಮಕ್ಕಳನ್ನ ಮನೆಗೆ ಕರೆದೊಯ್ಯುತ್ತಿದ್ದಾಗ ಮಾರುತಿ ಓಮಿನಿ ವ್ಯಾನ್  ವಿಜಯಾ ಬ್ಯಾಂಕ್ ಸರ್ಕಲ್ ಬಳಿ ಬರುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಂಡು ರಸ್ತೆಯಲ್ಲಿ ಇದ್ದವರು ಕೂಗಿಕೊಂಡಿದ್ದಾರೆ. ಇದರಿಂದ ಜಾಗೃತನಾದ ಚಾಲಕ ವಾಹನ ನಿಲ್ಲಿಸಿ ಮಕ್ಕಳನ್ನೆಲ್ಲ ಕೆಳಗಿಳಿಸಿ ದೂರ ಕರೆದೊಯ್ಯುದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸುತ್ತದ್ದ ಭಾರಿ ಅನಾಹುತ ತಪ್ಪಿದೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

NO COMMENTS

LEAVE A REPLY