ಎಸ್ ಬಿಐ ಎಟಿಎಂನಿಂದ 24 ಸಾವಿರ ರೂ. ಹರಿದ ನೋಟುಗಳು ಪತ್ತೆ

ಎಸ್ ಬಿಐ ಎಟಿಎಂನಿಂದ 24 ಸಾವಿರ ರೂ. ಹರಿದ ನೋಟುಗಳು ಪತ್ತೆ

184
0
SHARE

ಮೈಸೂರು(ನ,6,2017):ಕೆ.ಆರ್.ನಗರದ ಎಸ್ ಬಿಐ ಎಟಿಎಂನಿಂದ ಗ್ರಾಹಕರೊಬ್ಬರು ಹಣ ತೆಗೆದಾಗ ಬರೋಬ್ಬರಿ 24 ಸಾವಿರ ರೂ. ಹರಿದ ನೋಟುಗಳು ಬಂದಿವೆ.

ಮೈಸೂರಿನ ದೇವರಾಜ ಠಾಣೆಯ ಕಾನ್ಸಟೇಬಲ್ ಉಮೇಶ್ ಎಂಬವರಿಗೆ ತುರ್ತಾಗಿ 25 ಸಾವಿರ ರೂ.ಬೇಕಾಗಿತ್ತು. ಕೆ.ಆರ್.ನಗರದ ಎಸ್.ಬಿ.ಐ ಟಿಎಂನಿಂದ ಹಣ ತೆಗೆದಿದ್ದಾರೆ, ಆದರೆ ಅದರಲ್ಲಿ 24ಸಾವಿರ ರೂ.ಗಳು ಹರಿದಿರೋದು, ಬಣ್ಣ ಕಳೆದುಕೊಂಡಿರುವ ನೋಟುಗಳೇ ಸಿಕ್ಕಿವೆ.ಈ ಕುರಿತು ಅವರು ಠಾಣೆಯಲ್ಲಿ ದೂರು ಸಲ್ಲಿಸಬೇಕೆಂದಿದ್ದಾರೆ.

ಕಳೆದ ಭಾನುವಾರ ಹಾಗೂ ಈ ದಿನ ಕನಕ ಜಯಂತಿ ನಿಮಿತ್ತ ಎರಡು ದಿನ ಬ್ಯಾಂಕ್ ರಜೆ ಇರುವುದರಿಂದ ಮಂಗಳವಾರ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ತಿಳಿದೂ ಇಂತಹ ತಪ್ಪನ್ನು ಯಾಕೆ ಮಾಡುತ್ತಾರೆ. ಅವರಿಗೆ ಹರಿದ ನೋಟು ಚಲಾವಣೆಯಲ್ಲಿರಲ್ಲ ಎಂದು ತಿಳಿದಿಲ್ಲವೇ ಅಥವಾ ತಳಿದು ತಿಳಿದು ತಪ್ಪು ಮಾಡುತ್ತಾರಾ..? ಹರಿದ ಹಾಗೂ ಬಣ್ಣಗೆಟ್ಟ ನೋಟುಗಳನ್ನು ಎಟಿಎಂ ಗೆ ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಲಾಗುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

NO COMMENTS

LEAVE A REPLY