ಬಿಜೆಪಿಯವರು ಇಪ್ಪತ್ತು ಸಾವಿರ ಮತಗಳನ್ನ ಅಕ್ರಮವಾಗಿ ಮತಪಟ್ಟಿಯಲ್ಲಿ ಸೇರಿಸಿದ್ದಾರೆ: ಶಾಸಕ ಎಂ.ಕೆ ಸೋಮಶೇಖರ್

ಬಿಜೆಪಿಯವರು ಇಪ್ಪತ್ತು ಸಾವಿರ ಮತಗಳನ್ನ ಅಕ್ರಮವಾಗಿ ಮತಪಟ್ಟಿಯಲ್ಲಿ ಸೇರಿಸಿದ್ದಾರೆ: ಶಾಸಕ ಎಂ.ಕೆ ಸೋಮಶೇಖರ್

220
0
SHARE

ಮೈಸೂರು(ನ,4,2017):ಮೈಸೂರಿನ ಎಂ.ಪಿ‌.ಚುನಾವಣೆಯಲ್ಲಿ ಬಿಜೆಪಿಯವರು 20 ಸಾವಿರ ಮತಗಳು ಅಕ್ರಮವಾಗಿ ಮತಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದು ಶಾಸಕ ಎಂ.ಕೆ ಸೋಮಶೇಖರ್ ಪ್ರತ್ಯಾರೋಪ ಮಾಡಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ ಶಾಸಕ ಸೋಮಶೇಖರ್ ರವರು,ಬಿಜೆಪಿಯವರು ೨೦ ಸಾವಿರ ಮತಗಳನ್ನ ಅಕ್ರಮವಾಗಿ ಮತಪಟ್ಟಿಯಲ್ಲಿ ಸೇರಿಸಿದ್ದಾರೆ. ರಾಮದಾಸ್ ಅವರ ಹಳೆಯ ಮನೆ ಬಳಿಯೇ ಈ ಅಕ್ರಮ ನಡೆದಿದೆ ಎಂದು ದಾಖಲೆ ಸಹಿತ ಉತ್ತರ ನೀಡಿದರು.

ಇವರು ಕಳ್ಳ ವೋಟ್ ನಡೆಸಿ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಇಬ್ಬರು ಇರುವ ಜಾಗದಲ್ಲಿ 21 ಮಂದಿಯನ್ನ ಸೇರಿಸಿದ್ದಾರೆ. ಖಾಲಿ ಸೈಟ್‌ಗಳಲ್ಲಿ ಮತಗಳನ್ನ ಸೇರಿಸಿದ್ದಾರೆ. ಬಿಜೆಪಿಯವ್ರು ಕಳ್ಳ ವೋಟಿಂಗ್‌ ನಲ್ಲಿ ಚಾಣಕ್ಷ್ಯರು.ಇದರಲ್ಲಿ ಶಾಮೀಲಾದವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಮನವಿ ಮಾಡುತ್ತೇವೆ. ನ್ಯಾಯಾಂಗ ತನಿಖೆ ಬೇಡ, ಸಿಬಿಐಗೆ ವಹಿಸಬೇಕು ಎಂದು ಸೋಮಶೇಖರ್ ಒತ್ತಾಯಿಸಿದರು.

2011 ರಲ್ಲಿ ಇರುವ ಮುಸ್ಲಿಂರನ್ನ ಮತಪಟ್ಟಿಯಲ್ಲಿ ಡಿಲಿಟ್ ಮಾಡಿದ್ದಾರೆ. ಜಿಲ್ಲಾ ಚುನಾವಣೆ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದೇನೆ. ಎಲ್ಲಾ ರಾಮದಾಸ್ ಶಿಷ್ಯ ಕೃಷ್ಣ ಹಾಗೂ ರಂಗನಾಥ್ ಮಾಡಿದ್ದಾರೆ. ರಾಮದಾಸ್ ಮನೆಯಲ್ಲೇ‌ ಕುಳಿತು ಮತದಾರರ ಪಟ್ಟಿ ಸಿದ್ದ ಮಾಡಿದ್ರು. ಈ ಇಬ್ಬರು ಸರ್ಕಾರಿ ಅಧಿಕಾರಿಗಳು ರಾಮದಾಸ್ ಪರವಾಗಿ ಕೆಲಸ‌ ಮಾಡ್ತಾರೆ ಎಂದು ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.

NO COMMENTS

LEAVE A REPLY