ಅನುಮಾನಸ್ಪದವಾಗಿ ನೇಣಿಗೆ ಶರಣಾಗಿರುವ ಗೃಹಿಣಿ

ಅನುಮಾನಸ್ಪದವಾಗಿ ನೇಣಿಗೆ ಶರಣಾಗಿರುವ ಗೃಹಿಣಿ

204
0
SHARE

ಮೈಸೂರು(ನ,4,2017): ಮೊಬೈಲ್ ಮೂಲಕ ಪ್ರೀತಿ ಮಾಡಿ 7 ತಿಂಗಳಷ್ಟೆ ಮದುವೆಯಾಗಿದ್ದ ನವವಿವಾಹಿತೆ ಅನುಮಾನಸ್ಪದವಾಗಿ ನೇಣಿಗೆ ಶರಣಾಗಿರುವ ಘಟನೆ ನಗರದ ಗಂಗೋತ್ರಿ ಲೇಔಟ್ ನಲ್ಲಿ ನಡೆದಿದೆ.

ನೇಣಿಗೆ ಶರಣಾದ ನವವಿವಾಹಿತೆ ಅಕ್ಷತಾ(24).ಈಕೆ ಭಟ್ಕಳ್ ಮೂಲದವಳಾಗಿದ್ದು, ಮೊಬೈಲ್ ಮೂಲಕ ರಾಯಚೂರು ಮೂಲದ ವಿನಯ ಎಂಬುವನನ್ನ ಪ್ರೀತಿಸುತ್ತಿದ್ದಳು. ಈ ವಿಚಾರ ಹುಡುಗಿಯರ ಮನೆಯವರಿಗೆ ಗೊತ್ತಾಗಿದ್ದು, ಕೊನೆಗೆ ಹುಡುಗಿಯ ತಾಯಿ ಹುಡುಗನನ್ನ ಭಟ್ಕಳಕ್ಕೆ ಕರೆಸಿಕೊಂಡು ಸರಳವಾಗಿ ದೇವಸ್ಥಾನದಲ್ಲಿ ಮದುವೆ ಮಾಡಿ ಇಬ್ಬರನ್ನ ಮೈಸೂರಿಗೆ ಕಳುಹಿಸಿದ್ದರು, ಹುಡುಗ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಕಳೆದ ರಾತ್ರಿ ಕೆ.ಆರ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ತನ್ನ ದ್ವೀಚಕ್ರ ವಾಹನದಲ್ಲಿ ಬರುವಾಗ ವಿನಯ್ ಗೆ ಅಫಘಾತವಾಗಿದ್ದು, ತಕ್ಷಣ ಆತನನ್ನ ಆಟೋದವರು ಕೆ.ಆರ್ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಪಡೆದ ವಿನಯ ರಾತ್ರಿ ಮನೆಗೆ ಬಂದಿದ್ದು, ಬೆಳಗ್ಗೆ 9 ಗಂಟೆ ಸಮಯದಲ್ಲಿ ಠಾಣೆಯಲ್ಲಿರುವ ಬೈಕ್ ನ್ನ ಬಿಡಿಸಿಕೊಳ್ಳಬೇಕೆಂದು ಹೆಂಡತಿಯಿಂದ ಎರಡು ಸಾವಿರ ಹಣ ಪಡೆದು ಹೊರಗೆ ಹೋಗಿದ್ದಾನೆ.

ಆದರೆ 10 ಸಮಯಕ್ಕೆ ಹೆಂಡತಿ ಅಕ್ಷತಾ ನೇಣಿಗೆ ಶರಣಾಗಿದ್ದಾಳೆ.ಕಾರಣ ಮಾತ್ರ ನಿಗೂಡವಾಗಿದ್ದು ಯುವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇನ್ನೂ ಯಾರು ದೂರು ನೀಡಿಲ್ಲ.ದೂರು ನೀಡಿದ ನಂತರ ತನಿಖೆ ಕೈಗೊಳ್ಳುವುದಾಗಿ ಸರಸ್ವತಿಪುರಂ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY