ಹಿಂದಿ ಲೇಖಕಿ ಕೃಷ್ಣ ಸೋಬ್ತಿ 53ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ

ಹಿಂದಿ ಲೇಖಕಿ ಕೃಷ್ಣ ಸೋಬ್ತಿ 53ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ

168
0
SHARE

ನವದೆಹಲಿ(ನ.03,2017):ಪ್ರಖ್ಯಾತ ಹಿಂದಿ ಲೇಖಕಿಯಾದ ಕೃಷ್ಣ ಸೋಬ್ತಿ ಅವರನ್ನು 2017ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಮರ್ಶಕ ನಾಮವರ್ ಸಿಂಗ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಸೋಬ್ತಿ ಅವರು ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಆಧರಿಸಿ 53ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಿದೆ. 92 ವರ್ಷದ ಕೃಷ್ಣ ಸೋಬ್ತಿ ಅವರು ಹಿಂದಿ ಸಾಹಿತ್ಯದ ಹೆಸರಾಂತ ಲೇಖಕಿಯಾಗಿದ್ದು ಹಲವಾರು ಕಾದಂಬರಿ, ಸಣ್ಣಕಥೆಗಳನ್ನು ರಚಿಸಿ ತಮ್ಮದೇ ಆದ ವಿಶಿಷ್ಟತೆ ಪಡೆದಿದ್ದಾರೆ.ಇವರ ಕೆಲವು ಕೃತಿಗಳು ಇಂಗ್ಲಿಷಿಗೂ ಭಾಷಾಂತರವಾಗಿದೆ. ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಸೋಬ್ತಿ ಅವರಿಗೆ ಲಭಿಸಿದೆ.

NO COMMENTS

LEAVE A REPLY