100 ಸಿಸಿಗಿಂತ ಕಡಿಮೆ ಇರುವ ಬೈಕ್ ಗಳಲ್ಲಿ ಹಿಂಬದಿ ಕೂರುವಂತಿಲ್ಲ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

100 ಸಿಸಿಗಿಂತ ಕಡಿಮೆ ಇರುವ ಬೈಕ್ ಗಳಲ್ಲಿ ಹಿಂಬದಿ ಕೂರುವಂತಿಲ್ಲ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

142
0
SHARE

ಬೆಂಗಳೂರು(ನ,3,2017):100 ಸಿಸಿಗಿಂತ ಕಡಿಮೆ ಸಾಮರ್ಥ್ಯವುಳ್ಳ ಬೈಕ್ ಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವಂತಿಲ್ಲ ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಾಂತರ ತಡೆಯಾಜ್ಞೆ ನೀಡಿದೆ.

ಸಾರಿಗೆ ಇಲಾಖೆಯು 100 ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಬೈಕ್ ಗಳಲ್ಲಿ ಹಿಂಬದಿ ಸವಾರಿಯನ್ನು ಕೂರುವಂತಿಲ್ಲ ಎಂಬ ಆದೇಶ ಹೊರಡಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಹೋಂಡಾ, ಟಿವಿಎಸ್ ಕಂಪನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರದ ಆದೇಶಕ್ಕೆ ಮಧ್ಯಾಂತರ ತಡೆಯಾಜ್ಞೆ ನೀಡಿದೆ.ಅಲ್ಲದೇ ಮೋಟಾರು ವಾಹನ ನಿಯಮಾವಳಿ ಬದಲಾವಣೆಗೆ ಹೈಕೋರ್ಟ್ ಅವಕಾಶ ನೀಡಿದೆ.

ಅಸೋಸಿಯೇಷನ್ ಆಫ್ ಇಂಡಿಯಾ 100 ಸಿಸಿ ಬೈಕ್‌ಗಳಲ್ಲಿ ಹಿಂಬದಿ ಸವಾರರಿಗೆ ಅವಕಾಶ ನೀಡುತ್ತಿತ್ತು.ಇದೇ ಕಾರಣದಿಂದಾಗಿ 100 ಸಿಸಿ ಹಾಗೂ ಅದಕ್ಕಿಂತ ಕಡಿಮೆ ಸಿಸಿ ಇರುವ ಬೈಕ್‌ಗಳಲ್ಲೂ ಹಿಂಬದಿ ಸವಾರರಿಗೆ ಅವಕಾಶ ಕಲ್ಪಿಸಲಾಗಿತ್ತು. 2 ಸೀಟು ಎಂದು ನಮೂದಿಸಿ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು.ಇನ್ನು ಮುಂದೆ ಹೊಸ ಬೈಕ್‌ಗಳು 100 ಹಾಗೂ ಅದಕ್ಕಿಂತ ಕಮ್ಮಿ ಸಿಸಿ ಇದ್ದರೆ ಅದರಲ್ಲಿ ಕೇವಲ ಓರ್ವನ ಸವಾರಿಗೆ ಅವಕಾಶ ಸಿಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.

NO COMMENTS

LEAVE A REPLY