ಬಿಜೆಪಿ ಪರಿವರ್ತನಾ ರ‍್ಯಾಲಿಯಿಂದ ರಾಜಧಾನಿಯಲ್ಲಿ ಟ್ರಾಫಿಕ್ ಕಿರಿಕಿರಿ

ಬಿಜೆಪಿ ಪರಿವರ್ತನಾ ರ‍್ಯಾಲಿಯಿಂದ ರಾಜಧಾನಿಯಲ್ಲಿ ಟ್ರಾಫಿಕ್ ಕಿರಿಕಿರಿ

132
0
SHARE

ಬೆಂಗಳೂರು(ನ,2,2017): ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಚಾಲನೆ ದೊರೆತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಕಾರ್ಯಕರ್ತರು ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಲುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಸಂಪೂರ್ಣ ಸಂಚಾರ ಸ್ತಂಭನ ಸಂಭವಿಸಿದ್ದು,ವಾಹನಸವಾರರು ಗೊಂದಲದಿಂದ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಬೆಂಬಲಿಗರ ಜತೆ ಯಾತ್ರೆಯಲ್ಲಿ ಭಾಗವಹಿಸಿದ್ದು, ಚನ್ನಪಟ್ಟಣದಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಬೈಕ್ ಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜನ ರ‍್ಯಾಲಿಯಲ್ಲಿ ಭಾಗಿವಹಿಸಿದ್ದಾರೆ.ರಾಮನಗರ,ಬಿಡದಿ, ನೈಸ್ ರಸ್ತೆ ಮೂಲಕ ನೆಲಮಂಗಲ ಕಡೆ ರ‍್ಯಾಲಿ ನಡೆದಿದೆ.

ರ‍್ಯಾಲಿಗಾಗಿ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ಬೆಂಗಳೂರು ಕಡೆ ಹೊರಟ ಪರಿಣಾಮ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿ ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.

ಇನ್ನೊಂದೆಡೆ ಬಸ್, ವ್ಯಾನ್, ಕಾರು, ಬೈಕ್‌ಗಳ ಮೂಲಕ ಕಾರ್ಯಕರ್ತರು ಬಿಜೆಪಿ ಪರಿವರ್ತನಾ ಯಾತ್ರೆ ನಡೆಯುತ್ತಿರುವ ಮೈದಾನದ ಕಡೆಗೆ ಬರುತ್ತಿದ್ದಾರೆ.ಇದರಿಂದಾಗಿ ತುಮಕೂರು ರಸ್ತೆಯಲ್ಲಿ ವಾಹನಗಳು ಆಮೆಗತಿಯಲ್ಲಿ ಸಾಗುತ್ತಿವೆ.ಸಂಚಾರ ದಟ್ಟಣೆಯಲ್ಲಿ ಆಂಬುಲೆನ್ಸ್‌ಗಳೂ ಸಿಲುಕಿಕೊಂಡಿವೆ. ಬೇರೆ ಊರುಗಳಿಗೆ ತೆರಳಬೇಕಿರುವ ಪ್ರಯಾಣಿಕರ ಪಾಡು ಹೇಳತೀರದು.ಬಸ್‌ಗಳಲ್ಲೇ ಪ್ರಯಾಣಿಕರು ಗಂಟೆಗಟ್ಟಲೆ ಸಮಯ ಕಾಯುವಸ್ಥಿತಿ ಉಂಟಾಗಿದೆ.

NO COMMENTS

LEAVE A REPLY