ಪರಿವರ್ತನಾ ಯಾತ್ರೆ ಅಲ್ಲ,ಪಶ್ಚಾತಾಪದ ತೀರ್ಥಯಾತ್ರೆ: ಸಿಎಂ ಸಿದ್ದರಾಮಯ್ಯ

ಪರಿವರ್ತನಾ ಯಾತ್ರೆ ಅಲ್ಲ,ಪಶ್ಚಾತಾಪದ ತೀರ್ಥಯಾತ್ರೆ: ಸಿಎಂ ಸಿದ್ದರಾಮಯ್ಯ

222
0
SHARE

ಬೆಂಗಳೂರು(ನ,2,2017):ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವುದು ಪರಿವರ್ತನಾ ಯಾತ್ರೆ ಅಲ್ಲ.ಬದಲಾಗಿ ಅದು ಪಶ್ಚಾತಾಪದ ತೀರ್ಥಯಾತ್ರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಿದ್ದಾರೆ‌.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯದ್ದು ಪರಿವರ್ತನಾ ಯಾತ್ರೆ ಅಲ್ಲ. ಬಿಜೆಪಿ ನಾಯಕರ ಪರಿವರ್ತನಾ ಯಾತ್ರೆ. ಈ ಯಾತ್ರೆಯಿಂದ ಜನ ಬಿಜೆಪಿ ಪರವಾಗಿಲ್ಲ ಎಂಬುದು ಸಾಬೀತಾಗಿದೆ. ಕಾಂಗ್ರೆಸ್ ಪರ ಜನರಿದ್ದಾರೆ ಎಂದು ತಿಳಿಯುತ್ತದೆ ಎಂದರು

ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅಚ್ಚೇ ದಿನ್ ಆಯೇಗ ಅಂತಾರೆ. ಅದರೇ ಅಚ್ಚೇದಿನ್ ಬಂದಿರೋದು  ಅಂಬಾನಿ, ಅದಾನಿ, ಅಮಿತ್ ಶಾ ಆತನ ಮಗನಿಗೆ ಮಾತ್ರ. ನೋಟ್ ಬ್ಯಾನ್ ನಿಂದ ಜನ ಪರದಾಡಿ ಸಾಯುವಂತಾಗಿದೆ.  ಜಿಎಸ್‍ಟಿ ಗೊಂದಲ ಇನ್ನು ನಿವಾರಣೆ ಮಾಡಿಲ್ಲ ಇದೇ ಅಲ್ಲವೆ ಬಿಜೆಪಿಯ ಸಾಧನೆ. ಅತ್ಯಾಚಾರ ಮಾಡಿ ಜೈಲಿಗೆ ಹೋಗಿದ್ದು, ಬ್ಲೂ ಫಿಲ್ಮ್ ನೋಡಿ ಅಧಿಕಾರ ಕಳೆದುಕೊಂಡದ್ದು,ಗಣಿ ಹಣ ಲೂಟಿ ಹೊಡೆದಿದ್ದೇವೆ ಅಂತ ಜನರ ಮುಂದೆ ಹೋಗಿ ಹೇಳಲಿ. ತಮ್ಮ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಬಿಜೆಪಿ ನಾಯಕರಿಗೆ ಸಿಎಂ ವ್ಯಂಗ್ಯ ಮಾಡಿದರು.

NO COMMENTS

LEAVE A REPLY