ರಾಜ್ಯದಲ್ಲಿ ಆನೆಗಳ ಸಂತತಿ ಹೆಚ್ಚಳ, ಸಂತಾನಹರಣ ಚಿಕಿತ್ಸೆ ನೀಡಲು ಸರ್ಕಾರ ಚಿಂತನೆ

ರಾಜ್ಯದಲ್ಲಿ ಆನೆಗಳ ಸಂತತಿ ಹೆಚ್ಚಳ, ಸಂತಾನಹರಣ ಚಿಕಿತ್ಸೆ ನೀಡಲು ಸರ್ಕಾರ ಚಿಂತನೆ

288
0
SHARE

ಹಾಸನ(ಅ.31,2017): ರಾಜ್ಯದ ಅರಣ್ಯ ಪ್ರದೇಶದಲ್ಲಿ ಆನೆ ಸಂತತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಡಿವಾಣ ಹಾಕಲು ಸರಕಾರ ಮುಂದಾಗಿದ್ದು, ಕಾಡಾನೆಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ಚಿಂತಿಸಿದೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಂಗಳವಾರ ಮಾತನಾಡಿದ ಅರಣ್ಯ ಸಚಿವ ರಮಾನಾಥ್ ರೈ ರವರು
ಹಾಸನ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಆನೆಗಳ ಸಂತತಿ ಅಧಿಕಗೊಂಡಿರುವುದೇ ಈ ಸಮಸ್ಯೆಗೆ ಕಾರಣ. ಆದ್ದರಿಂದ ಈ ಹಾವಳಿ ತಡೆಗೆ ಸರಕಾರ ಹೊಸ ವಿಧಾನ ಅಳವಡಿಸಲು ಮುಂದಾಗಿದೆ ಎಂದರು.

ರಾಜ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಸುಮಾರು ೬ ಸಾವಿರ ಆನೆಗಳಿವೆ, ಈ ಪೈಕಿ ೧೫೦ ಆನೆಗಳಿಗೆ ಕೀನ್ಯಾದಲ್ಲಿ ಚಾಲ್ತಿಯಲ್ಲಿರುವ ಸಂತಾಹರಣ ಚಿಕಿತ್ಸೆ ನೀಡಲು ಸರಕಾರ ಚಿಂತನೆ ನಡೆಸಿದೆ, ಹೀಗೆ ಮಾಡುವುದರಿಂದ ಆನೆ ಕಾಟಕ್ಕೆ ತುಸು ತಪ್ಪಲಿದೆ ಎಂದರು. ಜೊತೆಗೆ ಹಾಸನದಲ್ಲಿ ಶೀಘ್ರವೇ ಶಾಶ್ವತ ಆನೆಧಾಮ ನಿರ್ಮಾಣ ಮಾಡುವ ಭರವಸೆಯನ್ನು ಸಹ ಸಚಿವರು ನೀಡಿದರು.

NO COMMENTS

LEAVE A REPLY