ಸ್ವಂತ ಚಿಕ್ಕಮ್ಮನನ್ನೇ ಪ್ರೀತಿಸಿ ಕರೆದುಕೊಂಡು ಪರಾರಿಯಾದ ಯುವಕ

ಸ್ವಂತ ಚಿಕ್ಕಮ್ಮನನ್ನೇ ಪ್ರೀತಿಸಿ ಕರೆದುಕೊಂಡು ಪರಾರಿಯಾದ ಯುವಕ

247
0
SHARE

ತುಮಕೂರು(ಅ,30,2017):ಯುವಕನೊಬ್ಬ ಸ್ವಂತ ತನ್ನ ಚಿಕ್ಕಮ್ಮನನ್ನೆ ಪ್ರೀತಿಸಿ ಮನೆಯಿಂದ ಓಡಿಸಿಕೊಂಡು ಹೋಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುರುವೇಕೆರೆ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುರುಳಿ(23) ಎಂಬಾತನೇ ಸ್ವಂತ ಚಿಕ್ಕಮ್ಮ ವಿಜಯಕಲಾ(39) ಳನ್ನ ಪ್ರೀತ ಮಾಡಿ ಇದೀಗ ಇಬ್ಬರು ಹೋಡಿಹೋಗಿದ್ದಾರೆ.ಪತಿ ನಾಗರಾಜು ತನ್ನ ಮೊದಲಹೆಂಡತಿ ಸತ್ತ ನಂತರ ವಿಜಯಕಲಾನನ್ನು ಎರಡನೇ ಮದುವೆಯಾಗಿದ್ದ.

ಈ ನಡುವೆ ಚಿಕ್ಕಮ್ಮ ವಿಜಯಕಲಾ ಯುವಕ ಮುರುಳಿಗೆ ತಾನೇ ಸತಃ ಪ್ರೋಪೋಸ್ ಮಾಡಿ ನಾನು ನಿನ್ನ ಲವ್ ಮಾಡ್ತೀನಿ ನೀನು ನನ್ನ ಲವ್ ಮಾಡು ಬೇಡಿಕೆ ಇಟ್ಟಿದ್ದಳು. ಈ ಮಾತಿಗೆ ಮರುಳಾಗಿದ್ದ ಮುರುಳಿ ಸ್ವಂತ ಚಿಕ್ಕಮ್ಮ ವಿಜಯಕಲಾನಾ ಜೊತೆ ಕಳೆದ ಆರು ತಿಂಗಳಿಂದ ಸಂಬಂಧ ಇಟ್ಟುಕೊಂಡಿದ್ದ.

ಇದೀಗ ಅತೀರೇಖವಾಗಿ ವಿಜಯಕಲಾ ತನ್ನ ಪ್ರೀತಿಗಾಗಿ ಎರಡು ಮಕ್ಕಳು ಮತ್ತು ಗಂಡನನ್ನು ಬಿಟ್ಟು ಪರಾರಿಯಾಗಿದ್ದಾಳೆ.ಈ ಕುರಿತು ನಾಗರಾಜು ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ತನ್ನ ಹೆಂಡತಿಯನ್ನು ನನ್ನ ತಮ್ಮನ ಮಗ ಮುರುಳಿ ಲವ್ ಮಾಡಿ ಕರೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಪತಿ ನಾಗರಾಜು ಆರೋಪಿಸಿದ್ದಾರೆ.ಪೊಲೀಸರು ಈ ಪ್ರೇಮಿಗಳು ಎಲ್ಲಿದ್ದಾರೆ ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.

NO COMMENTS

LEAVE A REPLY