ಜೆಡಿಎಸ್ ಶಾಸಕ ಚಿಕ್ಕಮಾದು ಆರೋಗ್ಯ ಸ್ಥಿತಿ ಗಂಭೀರ: ಅರವಿಂದ ಆಸ್ಪತ್ರೆಗೆ ದಾಖಲು

ಜೆಡಿಎಸ್ ಶಾಸಕ ಚಿಕ್ಕಮಾದು ಆರೋಗ್ಯ ಸ್ಥಿತಿ ಗಂಭೀರ: ಅರವಿಂದ ಆಸ್ಪತ್ರೆಗೆ ದಾಖಲು

265
0
SHARE

ಮೈಸೂರು(ಅ,30,2017) ಜಿಲ್ಲೆಯ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಚಿಕ್ಕಮಾದು ಉಸಿರಾಟ ತೊಂದರೆಯಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಶಾಸಕ ಚಿಕ್ಕಮಾದು. ಆರೋಗ್ಯ ತೀರ ಗಂಬೀರವಾಗಿದ್ದು, ಮೈಸೂರಿನ ಅರವಿಂದ ನಗರದ ಅರವಿಂದ ಆಸ್ಪತ್ರೆಗೆ’ ಚಿಕ್ಕಮಾದು ಅವರನ್ನು ದಾಖಲು ಮಾಡಲಾಗಿದೆ.ಕೃತಕ ಉಸಿರಾಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮೊದಲು ಚಿಕ್ಕಮಾದು ಸಿಗ್ಮಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಈ ವೇಳೆ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಸಿದ್ದರಾಮಯ್ಯ,ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು.ಇದೀಗ ಆರೋಗ್ಯದಲ್ಲಿ ಏರುಪೇರಾದ ಕಾರಣ ಅರವಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

NO COMMENTS

LEAVE A REPLY