ಕನ್ನಡದಲ್ಲಿ ನಮಸ್ಕರಿಸಿ ಭಾಷಣ ಪ್ರಾರಂಭ ಮಾಡಿದ ಮೋದಿ

ಕನ್ನಡದಲ್ಲಿ ನಮಸ್ಕರಿಸಿ ಭಾಷಣ ಪ್ರಾರಂಭ ಮಾಡಿದ ಮೋದಿ

280
0
SHARE

ಮಂಗಳೂರು(ಅ,29,2017):ಉಜಿರೆ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಟೇಡಿಯಂನಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 12 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರೂಪೇ ಕಾರ್ಡ್ ವಿತರಣೆ, ತಂತ್ರಾಂಶ ಆಧಾರಿತ ಸ್ವಸಹಾಯ ಸಂಘ ನಿರ್ವಹಣೆ ಒಪ್ಪಂದ ವಿನಿಮಯ ಮತ್ತು ಭೂಮಿ ತಾಯಿಯನ್ನು ರಕ್ಷಿಸಿ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸಿ ಅಭಿಯಾನ ಉದ್ಘಾಟನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.

ಈ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಧರ್ಮಸ್ಥಳದ ಎಲ್ಲ ಬಂಧುಗಳಿಗೆ ನನ್ನ ನಮಸ್ಕಾರ ಎಂದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕುರಿತು ಮಾತನಾಡಿದರು.ಪ್ರಧಾನಿ ಮೋದಿ ಅವರನ್ನು ಧರ್ಮಾಧಿಕಾರಿ ಮೋದಿ ಕುರ್ತಾ, ಕೋಟು ನೀಡಿ ಸನ್ಮಾನಿಸಿದರು.

ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಅನಂತಕುಮಾರ್, ಬಿ.ಎಸ್. ಯಡಿಯೂರಪ್ಪ, ನಳಿನ್ ಕುಮಾರ್‌ ಕಟೀಲ್, ಶಾಸಕ ವಸಂತ ಬಂಗೇರ ಉಪಸ್ಥಿತರಿದ್ದರು.

NO COMMENTS

LEAVE A REPLY