ಪ್ರೀತಿ ಹಾಗೂ ಕುಟುಂಬದ ನಡುವೆ ಸಿಲುಕಿದವರ ತಾರಕ

ಪ್ರೀತಿ ಹಾಗೂ ಕುಟುಂಬದ ನಡುವೆ ಸಿಲುಕಿದವರ ತಾರಕ

247
0
SHARE

ಪ್ರೀತಿ ಹಾಗೂ ಕುಟುಂಬದ ನಡುವೆ ಸಿಲುಕಿದವರ ತಾರಕ

ತಾರಾಗಣ: ದರ್ಶನ್, ಶಾನ್ವಿ ಶ್ರೀವಾಸ್ತವ್, ಶೃತಿ ಹರಿಹರನ್,
ದೇವರಾಜ್, ಅವಿನಾಶ್, ಶರತ್ ಲೋಹಿತಾಶ್ವ,
ಸುಮಿತ್ರಾ, ಚಿತ್ರಾ ಶಣೈ, ಕುರಿಪ್ರತಾಪ್.
ನಿರ್ದೇಶನ: ಮಿಲನ ಪ್ರಕಾಶ್

ಪ್ರೇಮ ಎಂಬುದು ಬರೀ ಸ್ವಾರ್ಥವೇ ಮಾತ್ರವಲ್ಲ. ಭಾವನೆಗಳ ತ್ಯಾಗವು ಕೂಡ ಹೌದು, ಅದೇ ನಿಜವಾದ ಪ್ರೀತಿ. ಎಂಬ ಭಾವನಾತ್ಮಕ ವಿಷಯ ಒಂದು ಭಾಗ ಹಾಗೂ ಕುಟುಂಬದ ಅಭಿಮಾನ ಮತ್ತು ಆತ್ಮವಿಶ್ವಾಸ ಇನ್ನೊಂದು ಭಾಗ ಇವೆರನ್ನು ಸಮಾನವಾಗಿ ನೀಡಿ, ಚಿತ್ರ ರಸಿಕರ ಮನ ಕರಗಿಸುವ ಒಂದು ಸುಂದರವಾದ ಕಥೆಯೇ ತಾರಕ.
ನಾಯಕ ನಟರಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿನೆಯ ಅಧ್ಬುತವಾಗಿದ್ದು,ನೋಡುಗರನ್ನು ಒಂದು ಕ್ಷಣ ಭಾವುಕರನ್ನಾಗಿ ಮಾಡುತ್ತದೆ. ಚಿತ್ರದಲ್ಲಿ ಬಹುಮುಖ್ಯವಾಗಿ ತೋರಿಸಿರುವ ಪ್ರೀತಿ ಮತ್ತು ತ್ಯಾಗದ ಕಥೆಯು ಕಣ್ಣಲ್ಲಿ ನೀರು ತುಂಬಿಸುತ್ತದೆ. ತಾರಕ್ ರಾಮ್ ವಿದೇಶದಲ್ಲಿ ಉತ್ತಮ ರಗ್ಬಿ ಆಟಗಾರ ಹಾಗೂ ಬಿಸಿನೆಸ್ ಮ್ಯಾನ್ ಆಗಿರಿತ್ತಾನೆ. ಪ್ರೀತಿ ಮತ್ತು ಮದುವೆ ವಿಚಾರದಲ್ಲಿ ತನ್ನದೇ ಆದ ವೃತ್ತ ಎಳೆದುಕೊಂಡಿರುತ್ತಾನೆ. ತನ್ನ ತಂದೆ,ತಾಯಿ ಸಾವಿಗೆ ತಾತನೆ ಕಾರಣ ಎಂದು ತಿಳಿದು, ಭಾರತಕ್ಕೆ ಬಾರದೇ ತಾತನನ್ನು ದ್ವೇಶಿಸುತ್ತಿರುತ್ತಾನೆ. ಆದರೆ ಇವನನ್ನು ನೋಡಬೇಕೇಂದು ತಾತ ಬಹಳ ಆಕಾಂಕ್ಷಿಯಾಗಿರುತ್ತಾನೆ. ಮೊದಲ ಭಾಗ ಎಳೆದಂತೆ ಕಂಡರು, ಎರಡನೇ ಭಾಗವಂತೂ ಕುತೂಹಲವಾಗಿದ್ದು, ಪ್ರೇಕ್ಷಕರನ್ನು ಚಿಂತಕರ ಚಾವಡಿಯಲ್ಲಿ ಕೂರಿಸಿಕೊಂಡು ಭಾವನಾತ್ಮಕ ಲೋಕಕ್ಕೆ ಕರೆದೂಯ್ಯುತ್ತದೆ.
ತಾತನ ಪಾತ್ರದಲ್ಲಿ ನಟಿಸಿರುವ ದೇವರಾಜ್ ರವರು ನಟನೆಯನ್ನು ಸವಾಲಾಗಿ ಸ್ವೀಕರಿಸಿ ತಾತನ ಪಾತ್ರಕ್ಕೆ ಪರಕಾಯಪ್ರವೇಶ ಮಾಡಿ ಅಧ್ಭುತವಾಗಿ ಜೀವತುಂಬಿದ್ದಾರೆ ಎನ್ನಬಹುದು. ಮೊಮ್ಮಗನ ಮೇಲೆ ಅಗಾದ ಪ್ರೀತಿಯನ್ನು ಹೊಂದಿದ್ದು, ತನ್ನ ಕಂಪನಿಗೆ ವಾರಸ್ಥಾರನಾಗಿ ಮಾಡಬೇಕೆಂಬ ನಿರ್ಧಾರ ಮಾಡಿರುತ್ತಾನೆ, ಇದಕ್ಕೆ ಆತ ಒಪ್ಪದಿದ್ದಾಗ ಆನಾರೋಗ್ಯಪೀಡಿತನಾಗುತ್ತಾನೆ. ಇನ್ನೂ ಚಿತ್ರದ ಮೊದಲ ನಾಯಕಿ ಮೀರಾ (ಶಾನ್ವಿ) ಮೊದಮೊದಲು ನಾಯಕನ ಹಿಂದೆ ಬಿದ್ದು ಪ್ರೀತಿ ಮಾಡಿ, ನಂತರದಲ್ಲಿ ತನಗೆ ಗುಣವಾಗದ ಖಾಲಿಲೆ ಇದೆ ಎಂದು ತಿಳಿದಾಗ, ದ್ವೇಶಿಸುವ ನಾಟಕ ಮಾಡಿ ತಾನು ದೂರವಾಗಿ ಅವನ ಕುಟುಂಬವನ್ನು ಹತ್ತಿರ ತರುವಲ್ಲಿ ಇವಳು ಕಾರಣವಾಗುತ್ತಾಳೆ. ಇನ್ನೂ ಎರಡನೇ ನಾಯಕಿ ಸ್ನೇಹಾ (ಶೃತಿ ಹರಿಹರನ್) ಪಕ್ಕಾ ಹಳ್ಳಿ ಸಂಪ್ರದಾಯಕ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕನ ಕುಟುಂಬಕ್ಕೆ ತುಂಬಾ ಹತ್ತಿರವಾಗಿ ಇದ್ದು ಅವರ ಸಂತೋಷಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುತ್ತಾಳೆ. ಈ ಮೀರ ಹಾಗೂ ಸ್ನೇಹಾಳ ಪ್ರವೇಶದಿಂದ ತಾರಕ್‍ನ ಜೀವನದಲ್ಲಿ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎಂಬುದು ಚಿತ್ರದ ಕಥೆಯಾಗಿದೆ.
ಪೋಷಕರ ಪಾತ್ರದಲ್ಲಿ ನಟಿಸಿರುವ ಅವಿನಾಶ್, ಜೈ ಜಗದೀಶ್, ಶರತ್ ಲೋಹಿತಾಶ್ವ, ಸುಮಿತ್ರಾ, ಚಿತ್ರಾ ಶಣೈ ಇವರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಸ್ಯ ಕಲಾವಿದರಾದ ಕುರಿಪ್ರತಾಪ್ ಹಾಗೂ ಮಹೇಂದ್ರ ಇವರಿಬ್ಬರ ತಂದೆ ಮಗನ ಹಾಸ್ಯ ಸೊಗಸಾಗಿದೆ. ಹೀಗೆ ಪ್ರೇಕ್ಷಕರನ್ನು ಮನರಂಜಿಸುವ ಪ್ರಯತ್ನ ನಿರ್ದೇಶಕ ಮಿಲನ ಪ್ರಕಾಶ್ ಮಾಡಿದ್ದಾರೆ.

:-ಚಂದ್ರಶೇಖರ್ ಬಿ,ಎನ್
ಪತ್ರಿಕೋದ್ಯಮ ವಿಭಾಗ
ಮಾನಸ ಗಂಗೋತ್ರಿ ಮೈಸೂರು

NO COMMENTS

LEAVE A REPLY