ದಯಾನಂದ ಸ್ವಾಮೀಜಿಯ ರಾಸಲೀಲೆ ವಿಡೀಯೋ ಇಟ್ಟುಕೊಂಡು 20 ಲಕ್ಷ ಹಣಕ್ಕೆ ಬೇಡಿಕೆ

ದಯಾನಂದ ಸ್ವಾಮೀಜಿಯ ರಾಸಲೀಲೆ ವಿಡೀಯೋ ಇಟ್ಟುಕೊಂಡು 20 ಲಕ್ಷ ಹಣಕ್ಕೆ ಬೇಡಿಕೆ

245
0
SHARE

ಬೆಂಗಳೂರು(ಅ,28,2017):ಬೆಂಗಳೂರಿನ ಹುಣಸಮಾರನಹಳ್ಳಿಯ ಜಂಗಮ ಮಠದ ದಯಾನಂದ ಸ್ವಾಮೀಜಿಯ ರಾಸಲೀಲೆ ವಿಡೀಯೋವನ್ನಿಟ್ಟುಕೊಂಡು ಹಣದ ಆಮೀಶ ಯತ್ನ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಮಠದಲ್ಲಿ ಕೆಲಸ ಮಾಡುತ್ತಿದ್ದ  ದಯಾನಂದ ಸಂಬಂಧಿಕರಾದ ಮಲ್ಲಿಕಾರ್ಜುನ್ ಮತ್ತು ಹಿಮಾಚಲ್ ಸ್ವಾಮೀಜಿಯನ್ನ ಹನಿ ಟ್ರ್ಯಾಪ್ ಗೆ ಸಿಲುಕಿಸಿದ್ದಾರೆ ಎಂದು ಹುಣಸೇಮಾರನಹಳ್ಳಿಯ ಗ್ರಾಪಂ ಮಾಜಿ ಸದಸ್ಯ ರಾಮಣ್ಣ ನಿನ್ನೆ ಆರೋಪಿಸಿದ್ದರು.

ರಾಸಲೀಲೆ ವೀಡಿಯೋ ಇಟ್ಟುಕೊಂಡು ಸ್ವಾಮೀಜಿ ದಯಾನಂದನ ಬಳಿ ಹರೀಶ್ ಎಂಬ ಯುವಕನ ಮೂಲಕ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ. ಹುಣಸೆಮಾರನಹಳ್ಳಿಯ ಹರೀಶ್ ಎಂಬಾತ ರಾಸಲೀಲೆ ವೀಡಿಯೋ ಇಟ್ಟುಕೊಂಡು 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಬಳಿಕ ಮಠದ ಭಕ್ತರು ಆತನನ್ನ ಹಿಡಿದು ಹೇಳಿಕೆ ವಿಡಿಯೋ ಮಾಡಿಕೊಂಡಿದ್ದು, ಆ ವಿಡಿಯೋವನ್ನ ಇದೀಗ ಬಿಡುಗಡೆ ಮಾಡಲಾಗಿದೆ. ವಿಡಿಯೋದಲ್ಲಿ ಮಾತನಾಡಿರುವ ಹರೀಶ್ ದಯನಾಂದ ಸ್ವಾಮೀಜಿ ಬಳಿ 20 ಲಕ್ಷಕ್ಕೆ ಬೇಡಿಕೆ ಇಡುವಂತೆ ಮಲ್ಲಿಕಾರ್ಜುನ್ ಮತ್ತು ಹಿಮಾಚಲ್ ತಿಳಿಸಿದ್ದರು ಎಂದು ಹೇಳಿದ್ದಾನೆ.

NO COMMENTS

LEAVE A REPLY