ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನಕ್ಕೆ 10 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪತ್ರ: ಜಿಲ್ಲಾಧಿಕಾರಿ ಡಿ.ರಂದೀಪ್

ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನಕ್ಕೆ 10 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪತ್ರ: ಜಿಲ್ಲಾಧಿಕಾರಿ ಡಿ.ರಂದೀಪ್

223
0
SHARE

ಮೈಸೂರು(ಅ,27,2017): ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅದಕ್ಕಾಗಿ 10 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದರು.

ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್  ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಬಳಿಕ ಮಾತನಾಢಿದ ಜಿಲ್ಲಾಧಿಕಾರಿ ಡಿ.ರಂದೀಪ್ 10 ಕೋಟಿ ವೆಚ್ಚದಲ್ಲಿ  ಮೈಸೂರಿನಲ್ಲಿ  ಸಾಹಿತ್ಯ ಜಾತ್ರೆ ನಡೆಯಲಿದೆ. ವೇದಿಕೆ, ಊಟ ಸೇರಿದಂತೆ ಇತರೆ ಖರ್ಚಿಗಾಗಿ ಹೆಚ್ಚು ಹಣ ಬೇಕಾಗುವ ಹಿನ್ನಲೆ, 10 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪಾರದರ್ಶಕವಾಗಿ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗದೆ. ಖರ್ಚು ವೆಚ್ಚ ಪರಿಶೀಲನೆಗಾಗಿ ಪತ್ಯೇಕ ಸಮಿತಿ ರಚನೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು 13 ಸಮಿತಿ ರಚಿಸಲಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ  ಮಾತನಾಡಿ ಬರಹಗಾರರು, ಪ್ರಕಾಶಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 500 ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿಗೆ ಅವಕಾಶ. ಈಗಾಗಲೇ 92 ಪುಸ್ತಕ ಮಳಿಗೆ ನೋಂದಣಿ ಮಾಡಲಾಗಿದೆ. ನ,10 ಕ್ಕೆ ಪುಸ್ತಕ ಮಳಿಗೆ ನೊಂದಣಿಗೆ ಕಡೆ ದಿನಾಂಕವಾಗಿದೆ. ಸುಮಾರು 12 ಸಾವಿರ ಪ್ರತಿನಿಧಿಗಳು ಸೇರಿಸಲು ಚಿಂತನೆ ನಡೆಸಲಾಗಿದೆ. ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 13 ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಸಾಹಿತ್ಯ ಸಮ್ಮೇಳನಕ್ಕಾಗಿ ಜನಪ್ರತಿನಿಧಿಗಳು,ಅಧಿಕಾರಿಗಳ ನೇಮಕ.ಪಟ್ಟಿ ಬಿಡುಗಡೆ….

ಮೆರವಣಿಗೆ ಸಮಿತಿಗೆ ಮೇಯರ್ ಎಂ.ಜೆ.ರವಿಕುಮಾರ್ ಅಧ್ಯಕ್ಷರಾಗಿ ನೇಮಕ.

ವೇದಿಕೆ ನಿರ್ವಹಣೆ ಸಮಿತಿಗೆ , ಶಾಸಕ ವಾಸು ಅಧ್ಯಕ್ಷ. ಕಾರ್ಯಧ್ಯಕ್ಷರಾಗಿ ಪಾಲಿಕೆ ಆಯುಕ್ತ  ಜೆ.ಜಗದೀಶ್.

ವಸತಿ ಮತ್ತು ಸಾರಿಗೆ ಸಮಿತಿಗೆ ಶಾಸಕ ಎಂ.ಕೆ.ಸೋಮಶೇಖರ್.

ಸಾಂಸ್ಕೃತಿಕ ಸಮಿತಿಗೆ ಜಿ.ಟಿ.ದೇವೇಗೌಡ.

ಆಹಾರ ಸಮಿತಿ ಅಧ್ಯಕ್ಷರಾಗಿ ಮುಡಾ ಅಧ್ಯಕ್ಷ ಡಿ.ಧೃವಕುಮಾರ್.

ಅಲಂಕಾರ ಸಮಿತಿ ಗೆ ಜಿಪಂ ಅಧ್ಯಕ್ಷೆ ನಹೀಮಾ ಸುಲ್ತಾನ್.

ನೋಂದಣಿ ಸಮಿತಿ ಗೆ ಅಧ್ಯಕ್ಷರಾಗಿ ಎಚ್.ಎ.ವೆಂಕಟೇಶ್, ಕಾರ್ಯಾ಼ಧ್ಯಕ್ಷ ಎಸ್ಪಿ ರವಿ. ಡಿ.ಚೆನ್ನಣ್ಣನವರ್.

ಮಹಿಳಾ ಸಮಿತಿ ಮೃಗಾಲಯ ಪಾಧಿಕಾರ ಅಧ್ಯಕ್ಷೆ ಮಲ್ಲಿಗೆ ವೀರೇಶ್.

ಆರೋಗ್ಯ ಸಮಿತಿಗೆ ಅಧ್ಯಕ್ಷೆ ರತ್ನ ಲಕ್ಷಣ್.

ಸ್ವಯಂ ಸೇವಕರ ನಿರ್ವಾಹಣಾ ಸಮಿತಿ ಅಧ್ಯಕ್ಷರಾಗಿ ಕಾಡಾ ಅಧ್ಯಕ್ಷ ನಂಜಪ್ಪ.

ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷರಾಗಿ ಜಿಪಂ ಉಪಾಧ್ಯಕ್ಷ ನಟರಾಜ್.

ಪ್ರಚಾರ ಸಮಿತಿ ಅಧ್ಯಕ್ಷರಾಗಿ ವೈ.ಡಿ.ರಾಜಣ್ಣ.

ಸ್ವಚ್ಚತಾ ಕಾರ್ಯ ಸಮಿತಿಗೆ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ರವರು.

NO COMMENTS

LEAVE A REPLY