ಹೊಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಹೆಚ್ಚುತ್ತಿರುವ ಅಪಘಾತ: ದ್ವಿಚಕ್ರ ವಾಹನಗಳ ಸಂಚಾರ ನಿಷೇದಕ್ಕೆ...

ಹೊಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಹೆಚ್ಚುತ್ತಿರುವ ಅಪಘಾತ: ದ್ವಿಚಕ್ರ ವಾಹನಗಳ ಸಂಚಾರ ನಿಷೇದಕ್ಕೆ ಚಿಂತನೆ

279
0
SHARE

ಬೆಂಗಳೂರು(ಅ,27,2017); ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಅಪಘಾತಗಳು ಹೆಚ್ಚುತ್ತಿರುವುದರ ಹಿನ್ನಲೆ ಹೂಸೂರು ರೋಡ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲು ಸಂಚಾರ ಪೋಲಿಸರು ಚಿಂತನೆ ನಡೆಸಿದ್ದಾರೆ.

ಈ ಕುರಿತು ಉನ್ನತ ಪೋಲಿಸ್ ಅಧಿಕಾರಿಗಳು ಶೀಘ್ರದಲ್ಲೇ ಕರ್ನಾಟಕ ಸರಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರದ ಜೋತೆ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

9.98 ಕಿ.ಮೀ ಎಕ್ಸ್‍ಪ್ರೆಸ್ ವೇ ನಲ್ಲಿ ಈ ವರ್ಷ ಹೆದ್ದಾರಿಯ ಗೋಡೆಗೆ ಡಿಕ್ಕಿ ಹೊಡೆದು ಅಪಘಾತಗಳಿಗೆ ಒಳಪಟ್ಟ ಹಲವು ಘಟನೆಗಳು ನಡೆದಿದೆ. ಎಕ್ಸ್ ಪ್ರೆಸ್ ವೇ ಕಾರು ಸಂಚಾರಕ್ಕೂ ಸೂಕ್ತವೇ ಎಂಬ ಬಗ್ಗೆಯು ಕುರಿತು ಪೋಲಿಸರು ಅಧ್ಯಯನ ನಡೆಸಿದ್ದಾರೆ. ಹಾಗೂ ಎಕ್ಸ್ ಪ್ರೆಸ್ ವೇ ನಿರ್ಮಾಣದ ವಿನ್ಯಾಸದಲ್ಲಿ ಲೋಪವಿದೆಯೇ ಎಂಬ ಬಗ್ಗೆಯೂ ಅಧ್ಯಯನದಲ್ಲಿ ಗಮನ ಹರಿಸಲಾಗಿದೆ. ಈ ಅಧ್ಯಯನದಲ್ಲಿ ತೊಂದರೆಯಿಲ್ಲ ಎಂದಾದರೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಸಿಗಲಿದೆ ಎಂದು ಪೋಲಿಸ್ ಉಪ ಆಯುಕ್ತ ಅಭಿಷೇಕ್ ಗೋಯಲ್ ತಿಳಿಸಿದ್ದಾರೆ.

NO COMMENTS

LEAVE A REPLY