ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪ: ನಟಿ ಪೂಜಾ ಗಾಂಧಿ ಜಿಲ್ಲಾ ಸತ್ರ ನ್ಯಾಯಲಯಕ್ಕೆ...

ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪ: ನಟಿ ಪೂಜಾ ಗಾಂಧಿ ಜಿಲ್ಲಾ ಸತ್ರ ನ್ಯಾಯಲಯಕ್ಕೆ ಹಾಜರು

295
0
SHARE

ರಾಯಚೂರು(ಅ,26,2017):2013ರ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಂಬಂಧ ಚಿತ್ರ ನಟಿ ಪೂಜಾ ಗಾಂಧಿ ಇಂದು ಜಿಲ್ಲಾ ಸತ್ರ ನ್ಯಾಯಲಯಕ್ಕೆ ಹಾಜರಾಗಲಿದ್ದಾರೆ.

ನಟಿ ಪೂಜಾ ಗಾಂಧಿ ಅವರು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿ ಎಸ್ ಆರ್ ಪಕ್ಷದಿಂದ ಸ್ಪರ್ಧಿಸಿದ್ದರು,ಈ ಸಂದರ್ಭದಲ್ಲಿ ಪರವಾನಿಗೆ ಇಲ್ಲದ ವಾಹನ ಬಳಸಿದ್ದರು.ಆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಸಂಬಂಧಪಟ್ಟಂತೆ ನ್ಯಾಯಲಯಕ್ಕೆ ಐದು ಬಾರಿ ಗೈರು ಹಾಜರಾಗಿದ್ದರಿಂದ ಅವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು.ಹೀಗಾಗಿ ಇಂದು ನಟಿ ಪೂಜಾ ಗಾಂಧಿ ನ್ಯಾಯಲಯಕ್ಕೆ ಹಾಜರಾಗಲಿದ್ದಾರೆ.ಮುಖ್ಯವಾಗಿ ಜಾಮೀನು ವಿಚಾರಣೆಯು ಸಂಜೆಯವರೆಗೂ ನಡೆಯಲಿದೆ,ಎಂದು ಪೂಜಾ ಗಾಂಧಿ ಪರ ವಕೀಲ ನಾಗರಾಜ ನಾಯಕ ತಿಳಿಸಿದ್ದಾರೆ.

NO COMMENTS

LEAVE A REPLY